ಮುಷ್ಕರ ನಿರತ ವೈದ್ಯರ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿದ ಮಮತಾ ಬ್ಯಾನರ್ಜಿ!

0
96

ನ್ಯೂಸ್ ಕನ್ನಡ ವರದಿ : ಕಿರಿಯ ವೈದ್ಯರೊಬ್ಬರ ಮೇಲಿನ ಹಲ್ಲೆ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವೈದ್ಯರ ಬೇಡಿಕೆಗಳಿಗೆ ಮಮತಾ ಬ್ಯಾನರ್ಜಿ ಒಪ್ಪಿಗೆ ಸೂಚಿಸಿದ್ದಾರೆ. ವೈದ್ಯರ ಪ್ರತಿಭಟನೆ ಶುರುವಾದಾಗ, ಸೇವೆಗೆ ಮರಳುವಂತೆ ಗುಡುವು ಕೊಟ್ಟು ಎಚ್ಚರಿಕೆ ನೀಡಿದ್ದ ಮಮತಾ ಬ್ಯಾನರ್ಜಿ ಈಗ ಮನವಿ ಮಾಡಿಕೊಂಡಿದ್ದಾರೆ. ತಮ್ಮೆಲ್ಲಾ ನ್ಯಾಯಯುತ ಬೇಡಿಕೆಗಳನ್ನು ಪರಿಗಣಿಸಿದ್ಧೇವೆ. ಇನ್ನೂ ಯಾವುದಾದರೂ ಬೇಡಿಕೆಗಳಿದ್ದರೂ ಅದರ ಬಗ್ಗೆ ಗಮನ ಹರಿಸುತ್ತೇವೆ. ತಾವು ದಯವಿಟ್ಟು ಪ್ರತಿಭಟನೆ ಕೈಬಿಟ್ಟು ಸೇವೆಗೆ ಮರಳಿ ಎಂದು ದೀದಿ ಕೇಳಿಕೊಂಡರು.

ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂಬುದು ಪ್ರತಿಭಟನಾನಿರತ ವೈದ್ಯರ ಪ್ರಮುಖ ಬೇಡಿಕೆಯಾಗಿದೆ. ಇದು ಹಾಗೂ ಮಮತಾ ಬ್ಯಾನರ್ಜಿ ಕ್ಷಮಾಪಣೆ ನೀಡಬೇಕು ಎಂಬುದು ಸೇರಿ ವೈದ್ಯರು 6 ಬೇಡಿಕೆಗಳನ್ನ ಮುಂದಿಟ್ಟಿದ್ದಾರೆ. ಒಂದು ವೇಳೆ, ಈ ಬಿಕ್ಕಟ್ಟು ಈಗಲೇ ಶಮನವಾಗದಿದ್ದರೆ ಸೋಮವಾರದಂದು ದೇಶಾದ್ಯಂತ ಲಕ್ಷಾಂತರ ವೈದ್ಯರು ಮುಷ್ಕರ ನಡೆಸಲಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ ಐಎಂಎ ಎಚ್ಚರಿಕೆ ನೀಡಿದೆ.

ಇನ್ನು ವೈದ್ಯರ ಮೇಲೆ ಹಲ್ಲೆ ನಡೆದ ಮರುದಿನವೆ ನಾನು ಮಾತನಾಡಲು ಮುಂದಾಗಿದ್ದೆ ಆದರೆ, ನನ್ನ ಜತೆ ಚರ್ಚಿಸಲು ಸಿದ್ಧರಿರಲಿಲ್ಲ. ನಮ್ಮ ಸರ್ಕಾರ ವೈದ್ಯರ ಮೇಲೆ ಎಸ್ಮಾ ಜಾರಿ ಮಾಡಿಲ್ಲ. ಎಲ್ಲರ ರಕ್ಷಣೆಯ ಹೊಣೆ ಹೊತ್ತುಕೊಂಡಿದ್ದೇವೆ, ಪ್ರತಿಭಟನೆಯಿಂದ ರೋಗಿಗಳಿಗೆ ತೊಂದರೆ ಉಂಟಾಗಿದೆ. ನ್ಯಾಯಯುತವಾದ ಎಲ್ಲಾ ಬೇಡಿಕೆಗಳನ್ನು ಪರಿಗಣಿಸಿರುವ ಸರ್ಕಾರ, ಬೇಡಿಕೆ ಈಡೇರಿಸಲು ಬದ್ಧವಾಗಿದೆ ಎಂದು ಸಿಎಂ ಮಮತಾ ಹೇಳಿದ್ದಾರೆ.

LEAVE A REPLY

Please enter your comment!
Please enter your name here