ರಾಹುಲ್ ಗಾಂಧಿ ಪ್ರಧಾನಿಯಾಗುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದ ಮಮತಾ ಬ್ಯಾನರ್ಜಿ?

0
326

ನ್ಯೂಸ್ ಕನ್ನಡ ವರದಿ (15.5.19): ರಾಹುಲ್ ಗಾಂಧಿಯವರನ್ನು ಪ್ರಧಾನಿಯಾಗಿ ಮಮತಾ ದೀದಿ ಒಪ್ಪಿಕೊಂಡರೇ ಎನ್ನುವುದು ಈಗ ಊಹಾಪೋಹಗಳು ನಡೆಯುತ್ತಾ ಇದೆ. “ನಮ್ಮ ಮೊದಲ ಆದ್ಯತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು. ಅದಕ್ಕಾಗಿ ನಾವು ಏನು ಮಾಡುವುದಕ್ಕೂ ರೆಡಿ” ಎಂದು ತೃಣಮೂಲ ಕಾಂಗ್ರೆಸ್ ನಾಯಕರೊಬ್ಬರು ಹೇಳಿರುವುದು ಭಾರೀ ಊಹೆಗೆ ಕಾರಣವಾಗಿದೆ ಈ ಮೂಲಕ ಟಿಎಂಸಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಒಪ್ಪಿಕೊಳ್ಳುವುದಕ್ಕೂ ತಾವು ಸಿದ್ಧ ಎಂದು ಪರೋಕ್ಷವಾಗಿ ಹೇಳಿದೆ.

ಸದ್ಯಕ್ಕೆ ನರೇಂದ್ರ ಮೋದಿ ನೇತ್ಟತ್ವದ ಎನ್ ಡಿಎ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದೇ ಮುಖ್ಯ ಗುರಿಯಾಗಿದ್ದು ಮಮತಾ ಅವರು ಒಪ್ಪಬಹುದು ಎನ್ನಲಾಗಿದೆ. ಮೇ 21 ರಂದು ವಿಪಕ್ಷಗಳ ಮುಖಂಡರು ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಸಭೆ ಸೇರಲಿದ್ದು, ಅಂದು ಮಮತಾ ಬ್ಯಾನರ್ಜಿ ಮತ್ತು ಮಾಯಾವತಿ ಗೈರಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ದೀದಿ ಈ ಸಭೆಗೆ ಹಾಜರಾಗಿದ್ದೇ ಆದಲ್ಲಿ ರಾಹುಲ್ ಅವರನ್ನು ಅವರು ಬೆಂಬಲಿಸುವ ಸುದ್ದಿಯೂ ನಿಜವಾದರೆ ಅಚ್ಚರಿಯಿಲ್ಲ.

LEAVE A REPLY

Please enter your comment!
Please enter your name here