ಟ್ರೋಫಿ ಗೆಲ್ಲದ ಆರ್ಸಿಬಿ ತಂಡವನ್ನು ಟ್ವೀಟ್ ಮೂಲಕ ವ್ಯಂಗ್ಯವಾಡಿದ ವಿಜಯ್ ಮಲ್ಯ!

0
381

ನ್ಯೂಸ್ ಕನ್ನಡ ವರದಿ(07.5.19): ಭಾರತದ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ಈ ಹಿಂದೆ ಐಪಿಎಲ್ ಪ್ರಾರಂಭದ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲಕರಾಗಿದ್ದರು. ಇದೀಗ ವಿದೇಶದಲ್ಲಿರುವ ವಿಜಯ್ ಮಲ್ಯ ಈ ಬಾರಿಯ ಐಪಿಎಲ್ ನಲ್ಲಿ ಬೆಂಗಳೂರು ತಂಡದ ಕಳಪೆ ಪ್ರದರ್ಶನದ ಕುರಿತಾದಂತೆ ಟ್ವೀಟ್ ಮಾಡುವ ಮೂಲಕ ವ್ಯಂಗ್ಯವಾಡಿದ್ದಾರೆ.

ಮ್ಮ ಅಧಿಕೃತ ಟ್ವಿಟರ್​ ಖಾತೆಯ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿರುವ ವಿಜಯ ಮಲ್ಯ, ಆರ್​ಸಿಬಿ ತಂಡ ಒಳ್ಳೆಯ ಆಟಗಾರರ ಶ್ರೇಣಿಯನ್ನೇ ಹೊಂದಿದೆ. ಆದರೆ, ಅವರು ಕಾಗದದ ಮೇಲಿನ ಹುಲಿಗಳು ಮಾತ್ರ. ಮರದ ಸ್ಪೂನ್​(ಬ್ಯಾಟ್​) ಮೂಲಕ ಎಲ್ಲರ ಆಸೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. ತಂಡದಲ್ಲಿ ನಾಯಕ ವಿರಾಟ್​ ಕೊಹ್ಲಿ, ಅನುಭವಿ ಎಬಿ ಡಿವಿಲಿಯರ್ಸ್​​, ಮಾರ್ಕಸ್​ ಸ್ಟೊನೀಸ್​, ಶಿಮ್ರಾನ್​ ಹೆಟ್ಮಯರ್​ ಹಾಗೂ ಟೀಮ್​ ಸೌಥಿಯಂತಹ ಒಳ್ಳೆಯ ಆಟಗಾರರಿದ್ದರೂ ಟ್ರೋಫಿ ಕೈಚೆಲ್ಲಿದ್ದಕ್ಕೆ ಅವರನ್ನು ಕಾಗದ ಮೇಲಿನ ಹುಲಿಗಳು ಎಂದು ಮಲ್ಯ ವ್ಯಂಗ್ಯವಾಡಿದ್ದಾರೆ.

LEAVE A REPLY

Please enter your comment!
Please enter your name here