ಆರೆಸ್ಸೆಸ್ ಸಂಘಟನೆಗೂ ಐಸಿಸ್ ಗೂ ಯಾವುದೇ ವ್ಯತ್ಯಾಸವಿಲ್ಲ: ಎಂ. ಅಳಗಿರಿ

0
269

ನ್ಯೂಸ್ ಕನ್ನಡ ವರದಿ(13.5.19): ಕಮಲ್ ಹಾಸನ್ ನಿನ್ನೆ ತಾನೇ “ಸ್ವತಂತ್ರ ಭಾರತದ ಪ್ರಥಮ ಭಯೋತ್ಪಾದಕ ನಾಥೂರಾಮ್ ಗೋಡ್ಸೆ ಓರ್ವ ಹಿಂದೂ” ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಬೆಂಬಲಿಸಿದ ತಮಿಳುನಾಡಿನ ಕಾಂಗ್ರೆಸ್ ಮುಖಂಡ ಎಂ. ಅಳಗಿರಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಐಸಿಸ್ ಭಯೋತ್ಪಾದಕ ಸಂಘಟನೆಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಕಮಲ್ ಹಾಸನ್ ಹೇಳಿದ್ದನ್ನು ನಾನು ಬೆಂಬಲಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

ಇಸ್ಲಾಮ್‌ ಬಗ್ಗೆ ಇಸ್ಲಾಮಿಕ್ ಸ್ಟೇಟ್ಸ್‌ ಹೇಗೆ ಆಲೋಚಿಸುತ್ತದೆಯೊ ಅದೇ ರೀತಿ ಹಿಂದುತ್ವದ ಬಗ್ಗೆ ಆರ್‌ಎಸ್‌ಎಸ್‌ ಯೋಚಿಸುತ್ತದೆ. ಆರ್‌ಎಸ್‌ಎಸ್‌, ಜನಸಂಘ, ಹಿಂದೂ ಮಹಾಸಭಾ… ಇವೆಲ್ಲವೂ ನಂಬಿರುವುದು ಒಂದೇ. ಯಾರು ತಮ್ಮ ಸಿದ್ಧಾಂತಗಳನ್ನು ಒಪ್ಪುವುದಿಲ್ಲವೊ ಅವರನ್ನು ನಿರ್ನಾಮಗೊಳಿಸಬೇಕು ಎನ್ನುವುದು’ ಎಂದರು.

‘ಅರಬ್‌ ದೇಶಗಳಲ್ಲಿ ಐಎಸ್‌ ಹೇಗಿದೆಯೊ ಇದೂ ಹಾಗೆಯೇ. ತಮ್ಮ ಸಿದ್ಧಾಂತಗಳನ್ನು ಒಪ್ಪದ ಮುಸ್ಲೀಮರನ್ನೂ ಉಳಿಸಬಾರದು ಎಂದೇ ಐಎಸ್‌ ಸಹ ಆ ದೇಶಗಳಲ್ಲಿ ಹೇಳುತ್ತದೆ. ತೀವ್ರ ಎಡಪಂಥೀಯರು ಮತ್ತು ತೀವ್ರ ಬಲಪಂಥೀಯರು ಒಂದೇ ನಿಯಮವನ್ನು ಪಾಲಿಸುತ್ತಾರೆ. ಧಾರ್ಮಿಕ ಮೂಲಭೂತವಾದಿಗಳೂ ಇದನ್ನೇ ನಂಬಿದ್ದಾರೆ’ ಎಂದು ವಿವರಿಸಿದರು.

LEAVE A REPLY

Please enter your comment!
Please enter your name here