LPG ಬೆಲೆ ಹೆಚ್ಚಳ: ಸ್ಮೃತಿ ಇರಾನಿ ಪ್ರತಿಭಟಿಸುತ್ತಿರುವ ಹಳೆ ಫೋಟೋ ಹಾಕಿ ರಾಹುಲ್ ವ್ಯಂಗ್ಯ

0
7

ನ್ಯೂಸ್ ಕನ್ನಡ ವರದಿ: ಎಲ್​ಪಿಜಿ ದರವನ್ನು ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಟೀಕಿಸಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಸಂಸದೆ ಸ್ಮೃತಿ ಇರಾನಿಯವರ ಹಳೆಯ ಫೋಟೋವನ್ನು ಟ್ವೀಟ್​ ಮಾಡಿ ಕೆಣಕಿದ್ದಾರೆ.

ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಎಲ್​ಪಿಜಿ ದರ ಹೆಚ್ಚಳವಾದಾಗ ರಸ್ತೆಗೆ ಇಳಿದು ಪ್ರತಿಭಟನೆ ಮಾಡಿದ್ದ ಸ್ಮೃತಿ ಅವರು ಈಗ ಎಲ್ಲಿ ಹೋದರು ಎಂಬರ್ಥದಲ್ಲಿ ರಾಹುಲ್ ಗಾಂಧಿ ವ್ಯಂಗ್ಯ ಮಾಡಿದ್ಧಾರೆ.

ಎಲ್​ಪಿಜಿ ಸಿಲಿಂಡರ್​ಗಳ ಬೆಲೆ ಬರೋಬ್ಬರಿ 154 ರೂಪಾಯಿಯಷ್ಟು ಹೆಚ್ಚಳವಾಗಿರುವುದಕ್ಕೆ ಬಿಜೆಪಿಯ ಈ ಸದಸ್ಯರು ನಡೆಸುತ್ತಿರುವ ಈ ಪ್ರತಿಭಟನೆಗೆ ನನ್ನ ಸಹಮತ ಇದೆ ಎಂದು ವ್ಯಂಗ್ಯಾರ್ಥದಲ್ಲಿ ರಾಹುಲ್ ಗಾಂಧಿ ಝಾಡಿಸಿದ್ದಾರೆ.

LEAVE A REPLY

Please enter your comment!
Please enter your name here