ಗಾಯಗೊಂಡಿರುವ ಧವನ್ ಸ್ಥಾನಕ್ಕೆ ರಿಷಭ್ ಪಂತ್: ಲಂಡನ್ ಗೆ ಪ್ರಯಾಣ

0
228

ನ್ಯೂಸ್ ಕನ್ನಡ ವರದಿ: (12.06.19): ಅಚ್ಚರಿಯೆಂಬಂತೆ ಭಾರತೀಯ ಕ್ರಿಕೆಟ್ ತಂಡದ ವಿಶ್ವಕಪ್ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯದ ಆಟಗಾರ ರಿಷಭ್ ಪಂತ್ ರನ್ನು ಇದೀಗ ಲಂಡನ್ ಗೆ ಕರೆಯಿಸಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಭಾರತ ತಂಡದ ಪ್ರಮುಖ ಆಟಗಾರ ಶಿಖರ್ ಧವನ್ ಗಾಯದ ಸಮಸ್ಯೆಯ ಕಾರಣದಿಂದ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಅವರ ಸ್ಥಾನವನ್ನು ತುಂಬಲು ಯುವ ಆಟಗಾರ ರಿಷಭ್ ಪಂತ್ ಲಂಡನ್ ಪ್ರವಾಸ ಬೆಳೆಸಿದ್ದಾರೆ ಎಂದು ತಿಳಿದು ಬಂದಿದೆ.

ಪಂತ್‌ ಅವರು ಕಳೆದೊಂದು ವರ್ಷದಿಂದ ಅತ್ಯುತ್ತಮ ಪಾರ್ಮ್ ನಲ್ಲಿದ್ದ ಹೊರತಾಗಿಯೂ ವಿಶ್ವ ಕಪ್‌ ತಂಡದಿಂದ ಅವರನ್ನು ಕೈಬಿಟ್ಟದ್ದು ಭಾರೀ ಚರ್ಚೆ, ಟೀಕೆಗೆ ಕಾರಣವಾಗಿತ್ತು.
ರಿಷಭ್‌ ಪಂತ್‌ ಅವರು ನ್ಯೂಜೀಲ್ಯಾಂಡ್‌ ಪಂದ್ಯದ ಮುನ್ನಾ ದಿನ ಭಾರತೀಯ ತಂಡವನ್ನು ಸೇರಿಕೊಳ್ಳುವರು. ಹಾಗಿದ್ದರೂ ಧವನ್‌ ಅವರು ವಿಶ್ವಕಪ್‌ ಪಂದ್ಯಾವಳಿಯ ಶೇಷ ಭಾಗಕ್ಕೆ ಲಭ್ಯರಿರುವ ಬಗ್ಗೆ ತಂಡದ ಆಡಳಿತೆಯು ಅಂತಿಮ ನಿರ್ಧಾರ ಕೈಗೊಳ್ಳುವ ತನಕ ಪಂತ್‌ ಅವರ ಸೇರ್ಪಡೆಯನ್ನು ಪರಿಗಣಿಸಲಾಗದು ಎಂದು ಮೂಲಗಳು ಹೇಳಿವೆ.

LEAVE A REPLY

Please enter your comment!
Please enter your name here