ಸುಂದರವಾಗಿದ್ದ ತನ್ನ ತುಟಿಗೆ ಸೌಂದರ್ಯ ಚಿಕಿತ್ಸೆ ನಡೆಸಿದವಳ ಅವಸ್ಥೆ ಏನಾಯಿತು ನೋಡಿ!

0
1403

ನ್ಯೂಸ್ ಕನ್ನಡ ವರದಿ: (13.12.18): ಪ್ರತಿಯೋರ್ವರಿಗೂ ತಮ್ಮ ಸಹಜವಾದ ಸೌಂದರ್ಯವೆಂಬುವುದು ಇದ್ದೇ ಇರುತ್ತದೆ. ಆದರೆ ಕೆಲವರಿಗೆ ಈ ಕುರಿತಾದಂತೆ ಅವಿರಿರುವುದಿಲ್ಲ. ಇನ್ನು ಕೆಲವರು ತಮ್ಮ ಸಹಜ ಸೌಂದರ್ಯವನ್ನು ಇನ್ನೂ ಹೆಚ್ಚಿಸಲು ಹೋಗಿ ಹಲವಾರು ಅನಾಹುತಗಳಿಗೆ ಈಡಾದ ಕುರಿತು ಈಗಾಗಲೇ ನಾವು ಅರಿತಿದ್ದೇವೆ. ಇದೀಗ ಯುನೈಟೆಡ್ ಕಿಂಗ್ಡಮ್ ಗೆ ಸೇರಿದ ಪ್ರದೇಶವೊಂದರ ಯುವತಿ ತನ್ನ ತುಟಿಗೆ ಬ್ಯೂಟಿ ಟ್ರೀಟ್ ಮೆಂಟ್ ನೀಡಲು ತೆರಳಿ ಇದ್ದ ಸೌಂದರ್ಯವನ್ನು ಹಾಳುಗೆಡವಿದ ಘಟನೆ ನಡೆದಿದೆ.

ತನ್ನ ಸ್ನೇಹಿತೆಯ ಮನೆಯಲ್ಲಿ ತುಟಿಯ ಸೌಂದರ್ಯಕ್ಕಾಗಿ ಇರುವ ಇಂಜೆಕ್ಷನ್ ಒಂದನ್ನು ನೋಡಿದ ರೇಚಲ್ ನ್ಯಾಪಿಯರ್ ಎಂಬಾಕೆ ತನ್ನ ತುಟಿಯ ಮೇಲೆ ಆ ಇಂಜೆಕ್ಷನ್ ಅನ್ನು ಚುಚ್ಚಿದ್ದೇ ಅನಾಹುತಕ್ಕೆ ಕಾರಣವಾಗಿದೆ. ತನ್ನ ತುಟಿಯ ಸೌಂದರ್ಯವನ್ನು ವೃದ್ಧಿಸುವ ಸಲುವಾಗಿ ತುಟಿಗೆ ಇಂಜೆಕ್ಷನ್ ಚುಚ್ಚಿದ್ದೇ ತಡ ತುಟಿಯ ಸ್ವರೂಪವು ಸಂಪೂರ್ಣ ವಿರೂಪವಾಗಲು ಪ್ರಾರಂಭವಾಯಿತು. ಬಳಿಕ ಅಲ್ಲಿಂದಲೇ ಸೀದಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರಿಗೂ ಈ ಕುರಿತು ಏನೂ ಮಾಡಲಾಗಿಲ್ಲ. ಹಲವಾರು ವಾರಗಳವರೆಗೆ ಮನೆಯಲ್ಲೇ ಕುಳಿತಿದ್ದ ರೇಚಲ್ ಗೆ ಹೊರಬರಲೂ ಸಾಧ್ಯವಾಗುತ್ತಿರಲಿಲ್ಲ. ಕೊನೆಗೆ ಇದೀಗ ವೈದ್ಯರ ಸತತ ಪ್ರಯತ್ನದಿಂದ ತುಟಿಯ ರೂಪದಲ್ಲಿ ಬದಲಾವಣೆಯಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here