ಬಿಜೆಪಿ ಕಚೇರಿ ಕಸ ಗುಡಿಸಿದ್ದು ಮುಗಿದಿದ್ದರೆ ವಾಪಸ್ ಬನ್ನಿ: ಮಹೇಶ್ ಕುಮಟಳ್ಳಿ ವಿರುದ್ಧ ಅಥಣಿ ಮತದಾರರ ಆಕ್ರೋಶ

0
45

ನ್ಯೂಸ್ ಕನ್ನಡ ವರದಿ: ಮಂತ್ರಿಗಿರಿ ಸಿಗದಿದ್ದರೆ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸುವುದಾಗಿ ಹೇಳಿದ್ದ ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧ ಅಥಣಿ ಮತದಾರರು ಆಕ್ರೋಶ ಹೊರಹಾಕಿದ್ದಾರೆ.

ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲವಾಗಿರುವ ಮಹೇಶ್ ಕುಮಟಳ್ಳಿ ಅವರು ಕಳೆದ ಹಲವು ದಿನಗಳಿಂದ ಬೆಂಗಳೂರಿನಲ್ಲಿಯೇ ಬೀಡು ಬಿಟ್ಟಿದ್ದಾರೆ. ಹೀಗಾಗಿ ಅವರ ವಿರುದ್ದ ಸಾಮಾಜಿಕ ಜಾಲತಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಕಚೇರಿ ಕಸಗುಡಿಸುವ ಕೆಲಸ ಮುಗಿದಿದ್ದರೆ ದಯವಿಟ್ಟು ಅಥಣಿ ಮತಕ್ಷೇತ್ರಕ್ಕೆ ಬನ್ನಿ. ಇನ್ನಾದರೂ ಪ್ರವಾಹ ಸಂತ್ರಸ್ತರ ಗೋಳು ಕೇಳಿ ಎಂದು ಅಥಣಿಯ ಪ್ರಮೋದ ಹಿರೇಮನಿ ಎಂಬುವರು ಪೋಸ್ಟ್ ಹಾಕಿದ್ದಾರೆ.

ಮಹೇಶ್​ ಕುಮಟಳ್ಳಿ ಕಳೆದ ಒಂದು ವಾರದಿಂದಲೂ ಕ್ಷೇತ್ರದ ಜನತೆಗೆ ಸಿಗುತ್ತಿಲ್ಲ. ಕೃಷ್ಣಾ ನದಿ ಪ್ರವಾಹದಿಂದ ತತ್ತರಿಸಿ ಹೋಗಿರುವ ಅಥಣಿ ತಾಲೂಕಿನ ವಿವಿಧ ಗ್ರಾಮಗಳು ಪ್ರವಾಹದಲ್ಲಿ ಅಪಾರ ಪ್ರಮಾಣದ ಹಾನಿಯಾಗಿದ್ದು ಅವರಿಗೆ ಪರಿಹಾರ ಬಂದಿಲ್ಲ.

ಈ ಹಿಂದೆಯೂ ಕುಮಟಳ್ಳಿ, ಸಚಿವ ಸ್ಥಾನಕ್ಕಾಗಿ ದೆಹಲಿ, ಬೆಂಗಳೂರು ಸುತ್ತಾಡಿದ್ದರು ‌. ಆದರೆ ಸಚಿವ ಸ್ಥಾನ ಸಿಗದೆ ಬಿಜೆಪಿ ವಿರುದ್ದ ಅಸಮಾಧನಗೊಂಡು ಇನ್ನು ಬೆಂಗಳೂರಿನಲ್ಲಿಯೇ ಮಹೇಶ ಕುಮಟಳ್ಳಿ ಇದ್ದಾರೆ . ಇದರಿಂದಾಗಿ ಕ್ಷೇತ್ರದ ಜನತೆ ಕುಪಿತಗೊಂಡಿದ್ದು, ಪ್ರವಾಹ ಸಂತ್ರಸ್ಥರ ಬಗ್ಗೆ ಗಮನ ವಹಿಸದೆ ಇದ್ದಲ್ಲಿ ಕಾಂಗ್ರೆಸ್ ಪಕ್ಷದಿಂದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here