ದುಬೈ: ಅಕ್ಟೋಬರ್ 25ರಂದು KSCC ವತಿಯಿಂದ ‘ಟೋಲರೆನ್ಸ್ ಟ್ರೋಫಿ 2019’ ವಾಲಿಬಾಲ್ ಪಂದ್ಯಾಕೂಟ

0
445

ನ್ಯೂಸ್ ಕನ್ನಡ ವರದಿ: KSCC ಟೋಲೆರೆನ್ಸ್ ಟ್ರೋಫಿ – ಪತ್ರಿಕಾ ಪ್ರಕಟಣೆ KSCC ಟಾಲರೆನ್ಸ್ ಟ್ರೋಫಿ – ವಾಲಿಬಾಲ್ ಪಂದ್ಯಾವಳಿ 2019 ರ ಅಕ್ಟೋಬರ್ 25 ರಂದು ದುಬೈನ ಅಲ್ ವಾಸ್ಲ್ ಕ್ಲಬ್‌ನಲ್ಲಿ ದುಬೈನಲ್ಲಿ ನಡೆಯಲಿದ್ದು, ಈ ಪ್ರಯುಕ್ತ ಪಂದ್ಯಾಕೂಟದ ಸಂಘಟನಾ ಸಮಿತಿ ರಚನೆ ಮತ್ತು ಭಾಗವಹಿಸುವ ತಂಡಗಳೊಂದಿಗೆ 2019 ರ ಅಕ್ಟೋಬರ್ 19 ರಂದು ಪೂರ್ವಭಾವಿ ಸಭೆ ಹಾಗೂ ಪತ್ರಿಕಾಗೋಷ್ಠಿ ದುಬೈ ಪರ್ಲ್ ಕ್ರೀಕ್ ಹೋಟೆಲ್‌ನಲ್ಲಿ ನಡೆಯಿತು.

ಯುಎಈ ಆಚರಿಸುತ್ತಿರುವಂತಹ ‘ಸಹಿಷ್ಣುತಾ ವರ್ಷ 2019’ ಅಂಗವಾಗಿ ಆಯೋಜಿಸುತ್ತಿರುವ ಪಂದ್ಯಾಕೂಟದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಹಫೀಜುದ್ದೀನ್ ಕಾಪು ವಹಿಸಿದ್ದರು. KSCC ಅಧ್ಯಕ್ಷ ಮೊಹಮ್ಮದ್ ಇಸ್ಮಾಯಿಲ್ ಅವರು ಪರಿಚಯಾತ್ಮಕ ಭಾಷಣ ಮಾಡಿದರು ಮತ್ತು ಚರ್ಚೆಯ ಕಾರ್ಯಸೂಚಿಗಳನ್ನು ಸಮಿತಿಯ ಉಪಾಧ್ಯಕ್ಷ ಶ್ರೀ ಹಫೀಜುದ್ದೀನ್ ಕಾಪು ವಿವರಿಸಿದರು.

ಸಭೆಯ ನಂತರ ಪತ್ರಿಕಾಗೋಷ್ಠಿ, ಜರ್ಸಿ ಬಿಡುಗಡೆ ಹಾಗೂ ಕಾರ್ಯಕ್ರಮದ ವೇಳಾಪಟ್ಟಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಎಲ್ಲಾ ಸಂಘಟನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಎಮ್ಸ್ಕ್ವೇರ್ ಎಂಜಿನಿಯರಿಂಗ್ ಕನ್ಸಲ್ಟೆಂಟ್‌ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಹಾಗೂ ಪಂದ್ಯಾಕೂಟದ ಮುಖ್ಯ ಪ್ರಾಯೋಜಕರಾದ ಮೊಹಮ್ಮದ್ ಮುಸ್ತಫಾ ಮತ್ತು ಕ್ಲಬ್‌ನ BOD ಸದಸ್ಯರಾದ ಖಲೀದ್ ಅಲ್ಮ್‌ಹೇರಿ ಅವರು ಅತಿಥಿಯಾಗಿ ಭಾಗವಹಿಸಿದ್ದರು.

ಭಾಗವಹಿಸುವ ತಂಡಗಳು ಕೆಳಗಿವೆ:
1) ಫ್ರೆಶ್ ಒನ್ಲೀ ದುಬೈ
2) ಸಿಎಚ್ಎಸ್ ದುಬೈ
3) ಯೂತ್ ಇಂಡಿಯಾ
4) ಡೀಸೆಲ್ ಲಿಂಕ್
5) ಅಮೇರಿಕನ್ ಯೂನಿವರ್ಸಿಟಿ ಆಫ್ ದುಬೈ
6) ಖಾನ್ ಕ್ಲಬ್
7) ಹೀಟ್ ಶೀಲ್ಡ್
8) ರೆಡ್ ಕ್ರಾಸ್

ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾದ ಮ್ಯಾಚ್ ರೆಫರಿ ಆಗಿರುವ ಮೊಹಿದ್ದೀನ್ ಪಂದ್ಯಾಕೂಟದ ನಿಯಮಗಳನ್ನು ಬಿಡುಗಡೆ ಮಾಡಿದರು. ನಂತರ ಪಂದ್ಯಾಕೂಟದ ವೇಳಾಪಟ್ಟಿ ಮತ್ತು ಭಾಗವಹಿಸುವ 8 ತಂಡಗಳ ಜರ್ಸಿಗಳನ್ನು ಬಿಡುಗಡೆ ಮಾಡಲಾಯಿತು. KSCC ಸಂಸ್ಥೆಯ ಉಪಾಧ್ಯಕ್ಷ ಹಫೀಜುದ್ದೀನ್ ಕಾಪು ಮತ್ತು ಮುಖ್ಯ ಅತಿಥಿ ಮೊಹಮ್ಮದ್ ಮುಸ್ತಫಾ ತಂಡದ ಪ್ರತಿನಿಧಿಗಳಿಗೆ ಹಸ್ತಾಂತರಿಸುವ ಮೂಲಕ ಜರ್ಸಿ ಬಿಡುಗಡೆ ಮಾಡಿ ಶುಭಹಾರೈಸಿದರು. ಕಾರ್ಯಕ್ರಮವನ್ನು ಶ್ರೀ ಜಿಯಾವುದ್ದೀನ್ ನಿರೂಪಿಸಿದರು.

ಸಂಘಟನಾ ಸಮಿತಿಯ ಅಧ್ಯಕ್ಷರಾಗಿ ಅಫ್ರೋಜ್ ಅಸ್ಸಾದಿ, ಉಪಾಧ್ಯಕ್ಷರಾಗಿ ಹಫೀಜುದ್ದೀನ್, ಸದಸ್ಯರುಗಳಾಗಿ ನೋಯೆಲ್ ಅಲ್ಮೇಡ, ಅಲ್ತಾಫ್ ಖಲೀಫಾ, ಮುಬೀನ್ ಉಡುಪಿ, ಸಮಿಯುಲ್ಲಾ, ಮಜೀದ್, ನಸೀರ್, ಅಬ್ದುಲ್ ಹಮೀದ್, ಮೊಹಮ್ಮದ್ ಶಫಿ, ತನ್ವೀರ್ ಮತ್ತು ಅಲ್ತಾಫ್ ಕುದ್ರೋಳಿ ನೇಮಕಗೊಂಡರು.

ಪಂದ್ಯಾಕೂಟದ ಸಂಘಟನಾ ಸಮಿತಿಯು ಭಾಗವಹಿಸುವ ಎಲ್ಲಾ ತಂಡಗಳು ತಮ್ಮ ಮುಂಬರುವ ಪಂದ್ಯಗಳಿಗೆ ಶುಭ ಹಾರೈಸುತ್ತಾ ಪಂದ್ಯಾಕೂಟವನ್ನು ಯಶಸ್ವಿಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳನ್ನು ಒಗ್ಗೂಡಿಸಲು ಅನಿವಾಸಿಗರಿಗೆ ವಿನಂತಿಸಿದ್ದು, ಪಂದ್ಯಾಕೂಟದ ಕುರಿತು ಯಾವುದೇ ಸ್ಪಷ್ಟೀಕರಣ ಅಥವಾ ಹೆಚ್ಚಿನ ಮಾಹಿತಿಗಾಗಿ 0554066926, 0554505431 ಸಂಪರ್ಕಿಸಲು ಕೋರಲಾಗಿದೆ.

LEAVE A REPLY

Please enter your comment!
Please enter your name here