ಕೊರೋನ ಎಮರ್ಜೆನ್ಸಿ ಸಮಯದಲ್ಲೂ ‘ನಿರ್ಗತಿಕರ ಸೇವೆ’ ಎಂದು ವಸೂಲಿಗಿಳಿದ RSS: ಡಿಕೆಶಿ ಆರೋಪ

0
13

ನ್ಯೂಸ್ ಕನ್ನಡ ವರದಿ: ವಿಶ್ವವೇ ಕೊರೋನ ವೈರಸ್ ಸೋಂಕು ಭೀತಿಯಿಂದ ಸ್ತಬ್ಧವಾಗಿದ್ದು, ಭಾರತದಲ್ಲಿ ವಿಧಿಸಲಾಗಿರುವ ಲಾಕ್‍ಡೌನ್ ಸಂದರ್ಭದಲ್ಲಿ ದುಡಿಮೆ ಇಲ್ಲದವರಿಗೆ, ನಿರ್ಗತಿಕರಿಗೆ ಸಹಾಯ ಮಾಡುತ್ತೇವೆ ಎಂದು ಆರ್ ಎಸ್ ಎಸ್ ವಸೂಲಿಗೆ ಇಳಿದಿದ್ದು, ಎಲ್ಲಗೆ ಕಲೆಕ್ಷನ್ ಆರಂಭಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಇಂದು ತಮ್ಮ ಮನೆಯಾದ
ಬೆಂಗಳೂರಿನ ಸದಾಶಿವನಗರದಲ್ಲಿ ತುರ್ತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆರ್‍ಎಎಸ್‍ಎಸ್‍ನವರು ವಾಹನಗಳನ್ನು ತೆಗೆದುಕೊಂಡು ಹೋಗಿ ವಸೂಲಿ ಮಾಡುತ್ತಿದ್ದಾರೆ. ಅಕ್ಕಿ, ಬೆಳೆ, ಅಡುಗೆ ಎಣ್ಣೆ ಸೇರಿಂದತೆ ಎಲ್ಲವನ್ನು ದುಡಿಮೆ ಇಲ್ಲದ ಜನರಿಗೆ ಹಂಚುತ್ತೇವೆ ಎಂದು ಹೇಳಿಕೊಂಡು ದಬ್ಬಾಳಿಕೆ ಮೂಲಕ ಕಲೆಕ್ಷನ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿಯವರು ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿದ್ದಾರೆ. ಅದನ್ನು ಗೌರವಿಸಿ ಎಲ್ಲರೂ ಮನೆಯಲ್ಲೆ ಉಳಿದಿದ್ದಾರೆ. ಈ ಸಂದರ್ಭದಲ್ಲಿ ಆರ್‍ಎಸ್‍ಎಸ್‍ನವರು ಮುಖ್ಯಮಂತ್ರಿ ಮತ್ತು ಪೊಲೀಸರಿಂದ ಅನುಮತಿ ಪಡೆದಿದ್ದೇವೆ ಎಂದು ಹೇಳಿಕೊಂಡು ಎಲ್ಲೆಡೆ ಓಡಾಡುತ್ತಿದ್ದಾರೆ. ಕೊರೊನಾ ಒಂದು ಸರ್ಕಾರ ಅಥವಾ ಪಕ್ಷದ ಸಮಸ್ಯೆ ಅಲ್ಲ. ವಿಶ್ವದ ಸಮಸ್ಯೆ. ಇಂತಹ ಸಂದರ್ಭದಲ್ಲಿ ಒಂದು ಸಂಘಟನೆಗೆ ಮಾತ್ರ ಅವಕಾಶ ಕೊಟ್ಟು ಉಳಿದವರಿಗೆ ನಿರಾಕರಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಜನರ ಸೇವೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ನನಗೆ ರಾಜ್ಯದ ಮೂಲೆ ಮೂಲೆಗಳಿಂದಲೂ ಕರೆ ಮಾಡಿ ನಾವು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಹೋಗುತ್ತೇವೆ ಎಂದು ಹೇಳುತ್ತಿದ್ದಾರೆ. ನಾವು ಸರ್ಕಾರದ ಆದೇಶ ಪಾಲಿಸಬೇಕು ಎಂದು ಹೇಳಿ ನಾನೇ ಅವರಿಗೆ ಸ್ವಲ್ಪ ದಿನ ಸುಮ್ಮನಿರಲು ಹೇಳುತ್ತಿದ್ದೇನೆ.

ಈಗ ನೋಡಿದರೆ ಸರ್ಕಾರ ಒಂದು ಸಂಘಟನೆಗೆ ಮಾತ್ರ ಅವಕಾಶ ನೀಡಿದೆ. ರೈತ ಸಂಘ ಸೇರಿ ಅನೇಕ ಸಂಘಟನೆಗಳು ತಾವು ಜನ ಸೇವೆ ಮಾಡುತ್ತೇವೆ ಎಂದು ಮುಂದಾಗಿದ್ದಾರೆ. ಎಲ್ಲರೂ ಕಾನೂನು ಪಾಲನೆ ಮಾಡುತ್ತಿರುವಾಗ ವಸೂಲಿ ವೀರರಾದ ಆರ್ ಎಸ್ ಎಸ್ ನವರು ಮಾತ್ರ ಜನ ಸೇವೆ ಮಾಡಲು ಹೋಗುವುದೆಂದರೆ ಏನರ್ಥ ಎಂದು ಪ್ರಶ್ನಿಸಿದರು

LEAVE A REPLY

Please enter your comment!
Please enter your name here