ನೀತಿ ಸಂಹಿತೆಗೆ ಮಣ್ಣು ಹಾಕಿ, ಅದು ನೀತಿಯಿಲ್ಲದ ಸಮಿತಿ: ಕಲ್ಲಡ್ಕ ಪ್ರಭಾಕರ ಭಟ್ ವಿವಾದ

0
625

ನ್ಯೂಸ್ ಕನ್ನಡ ವರದಿ-(07.04.18): ಚುನಾವಣೆಯು ಆಗಮಿಸುತ್ತಿದ್ದಂತೆಯೇ ವಾಡಿಕೆಯಂತೆ ಕಲ್ಲಡ್ಕ ಪ್ರಭಾಕರ ಭಟ್ ಪ್ರಚೋದನಕಾರಿ ಮತ್ತು ವಿವಾದಾತ್ಮಕ ಹೇಳಿಕೆ ನಿಡಲು ಪ್ರಾರಂಭಿಸಿದ್ದಾರೆ. ಮೊನ್ನೆ ತಾನೇ ಯುಟಿ ಖಾದರ್ ಆಗಮಿಸಿದ ದೇವಾಲಯಕ್ಕೆ ಬ್ರಹ್ಮಕಲಶ ಮಾಡಬೇಕು ಹಾಗೂ ಗೋಮಾಂಸ ತಿನ್ನುವ ಖಾದರ್ ನನ್ನು ದೇವಳದ ಒಳಗೆ ಬಿಟ್ಟದ್ದೇ ತಪ್ಪು ಎಂದು ಹೇಳಿದ್ದರು. ಇದೀಗ ಗೋವುಗಳನ್ನು ಕಳ್ಳತನ ಮಾಡಿದ ನೈಜ ಆರೋಪಿಗಳನ್ನು ಬಂಧಿಸಬೇಕೆಂದು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಆರೆಸ್ಸೆಸ್ ಮುಖಂಡ ಡಾ. ಪ್ರಭಾಕರ ಭಟ್, ಚುನಾವಣಾ ನೀತಿ ಸಂಹಿತೆಯ ಕುರಿತು ಕೀಳು ಭಾಷೆಯಲ್ಲಿ ನಿಂದಿಸಿದ್ದಾರೆ.

ನಮ್ಮ ಕರ್ನಾಟಕವನ್ನು ಮೊಘಲರು, ಬ್ರಟಿಷರಿಗಿಂತ ಕೆಟ್ಟದಾಗಿ ಈಗಿನ ಸರಕಾರ ಆಳ್ವಿಕೆ ಮಾಡುತ್ತಿದೆ. ಹಿಂದೂ ಧರ್ಮವನ್ನು ನಾಶ ಮಾಡಲು ಈಗಿನ ಸರಕಾರವು ಪ್ರಯತ್ನಿಸುತ್ತಿದೆ ಎಂದಾಗ ಸಭೆಯಲ್ಲಿದ್ದ ಕೆಲವರು ಚುನಾವಣಾ ನೀತಿ ಸಂಹಿತೆಯ ಕುರಿತಾದಂತೆ ಎಚ್ಚರಿಸಿದರು. ಆದರೆ ಅದಕ್ಕೆ ಕ್ಯಾರೇ ಅನ್ನದ ಪ್ರಭಾಕರ ಭಟ್, ಚುನಾವಣಾ ನೀತಿ ಸಂಹಿತೆಗೆ ಮಣ್ಣು ಹಾಕಿ, ಅದೊಂದು ನೀತಿಯಿಲ್ಲದ ಸಮಿತಿ ಎಂದು ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ರೀತಿಯ ಅವಹೇಳನಕಾರಿ ಹೇಳಿಕೆ ನಿಡಿರುವ ಪ್ರಭಾಕರ ಭಟ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here