ಕನ್ನಡ ಭಾಷೆಯಲ್ಲಿ ಟ್ವೀಟ್ ಮಾಡಿದ ಆರ್.ಸಿ.ಬಿ ನಾಯಕ ವಿರಾಟ್ ಕೊಹ್ಲಿ!

0
157

ನ್ಯೂಸ್ ಕನ್ನಡ ವರದಿ(06.5.19): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡÀವು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸೋಲನುಭವಿಸಿ ನಾಕೌಟ್ ಹಂತದಲ್ಲಿ ಹೊರ ಬಿದ್ದರೂ ಕೂಡಾ, ಆರ್ಸಿಬಿ ಅಭಿಮಾನಿಗಳು ಮಾತ್ರ ತಂಡವನ್ನು ಬೇರೆಯೇ ಲೆವೆಲ್ ಗೆ ಕೊಂಡೊಯ್ದಿದ್ದಾರೆ. ತಂಡವೆಷ್ಟೇ ಸೋತರೂ ಅಭಿಮಾನಿಗಳ ಉತ್ಸಾಹ ಮಾತ್ರ ಕಡಿಮೆಯಾಗಿರಲಿಲ್ಲ. ಕೊನೆಯ ಪಂದ್ಯದಲ್ಲೂ ಸಾಕಷ್ಟು ಅಭಿಮಾನಿಗಳು ಸೇರಿದ್ದು ಇದಕ್ಕೆ ಸಾಕ್ಷಿಯಾಗಿತ್ತು. ಇದೀಗ ತಮ್ಮ ಅಭಿಮಾನಿಗಳನ್ನುದ್ದೇಶಿಸಿ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.

ಇದೀಗ ಟೂರ್ನಿಯುದ್ದಕ್ಕೂ ತಂಡವನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ. ಹೌದು! “ಸನ್‌ರೈಸರ್ಸ್ ಹೈದರಾಬಾದ್’ ವಿರುದ್ಧದ ಗೆಲುವಿನ ಬಳಿಕ ಕೊಹ್ಲಿ ತಂಡವನ್ನು ಬೆಂಬಲಿಸಿದ ಎಲ್ಲ ಅಭಿಮಾನಿಗಳು, ತಂಡದ ಸದಸ್ಯರು, ಗ್ರೌಂಡ್ ಸ್ಟಾಫ್, ಸಪೂರ್ಟ್ ಸ್ಟಾಫ್ ಎಲ್ಲರಿಗೂ ತುಂಬು ಹೃದಯದ ಧನ್ಯವಾದ. ಮುಂದಿನ ವರ್ಷ ಬಲಿಷ್ಠವಾಗಿ ಮತ್ತೆ ಬರುತ್ತೇವೆ ಎಂದು ಇಂಗ್ಲೀಷ್‍‌ನಲ್ಲಿ ಟ್ವೀಟ್ ಮಾಡಿದ ಕೊಹ್ಲಿ, “ನೀವು ಇಲ್ಲಾಂದ್ರೆ, ನಾವು ಏನೂ ಅಲ್ಲಾ’ ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here