ಸ್ಟೀವ್ ಸ್ಮಿತ್ ಗೆ ಚಪ್ಪಾಳೆ ತಟ್ಟಿ ಎಂದು ಭಾರತೀಯ ಪ್ರೇಕ್ಷಕರಲ್ಲಿ ಕೇಳಿಕೊಂಡ ವಿರಾಟ್ ಕೊಹ್ಲಿ!

0
1419

ನ್ಯೂಸ್ ಕನ್ನಡ ವರದಿ: (10.06.19): ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ನಿಷೇಧಕ್ಕೊಳಗಾಗಿದ್ದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ರನ್ನು ಈ ಅಪವಾದವು ಈಗಲೂ ಬೆನ್ನುಬಿಟ್ಟಿಲ್ಲ. ವಿಶ್ವಕಪ್ ಕ್ರಿಕೆಟ್ ನಲ್ಲಿ ಮತ್ತೆ ಮರಳಿ ತಂಡಕ್ಕೆ ಸೇರ್ಪಡೆಗೊಂಡರೂ, ಪ್ರೇಕ್ಷಕರು ಮಾತ್ರ ಇವರನ್ನು ಕಿಚಾಯಿಸುವುದು ನಿಲ್ಲಿಸಿಲ್ಲ. ಇದೀಗ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಸ್ಟೀವ್ ಸ್ಮಿತ್ ರ ಕಾರಣದಿಂದಾಗಿ ವಿರಾಟ್ ಕೊಹ್ಲಿ ಕ್ರೀಡಾಭಿಮಾನಿಗಳ ಮನಗೆದ್ದಿದ್ದಾರೆ.

ಕ್ರೀಡಾಂಗಣದಲ್ಲಿ ಅಹಂಕಾರಿ ವರ್ತನೆ ತೋರುತ್ತಾರೆ ಎನ್ನುವ ಅಪವಾದವೊಂದು ವಿರಾಟ್ ಕೊಹ್ಲಿ ಮೇಲಿದೆ. ಆದರೆ ಪಂದ್ಯದ ವೇಳೆ ಈ ಅಪವಾದಕ್ಕೆ ವಿರುದ್ಧ ವರ್ತನೆ ವಿರಾಟ್ ತೋರಿದ್ದಾರೆ. ಬೌಂಡರಿ ಲೈನ್ ಬಳಿ ನಿಂತಿದ ಸ್ಮಿತ್ ರನ್ನು ಭಾರತೀಯ ಅಭಿಮಾನಿಗಳು ಕಿಚಾಯಿಸುತ್ತಿದ್ದರು. ಇದನ್ನು ಕಂಡ ವಿರಾಟ್ ಕೂಡಲೇ ಅವರತ್ತ ತಿರುಗಿ, ಅವರನ್ನು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ, ಕಿಚಾಯಿಸಬೇಡಿ ಎಂದ ಸನ್ನೆಯ ಮೂಲಕ ಮನವಿ ಮಾಡಿದರು. ಇದು ಕಂಡ ಸ್ಮಿತ್ ಕೊಹ್ಲಿ ಬೆನ್ನು ತಟ್ಟಿದರು. ಸದ್ಯ ಈ ವೀಡಿಯೋ ವೈರಲ್ ಆಗಿದೆ.

LEAVE A REPLY

Please enter your comment!
Please enter your name here