ವಿಶ್ವಕಪ್ ಕ್ರಿಕೆಟ್: ಸಚಿನ್, ಗಂಗೂಲಿಯನ್ನು ಹಿಂದಿಕ್ಕಿ ನೂತನ ವಿಶ್ವದಾಖಲೆ ನಿರ್ಮಿಸಿದ ಕೊಹ್ಲಿ!

0
198

ನ್ಯೂಸ್ ಕನ್ನಡ ವರದಿ: (16.06.19): ಹಲವಾರು ದಿನಗಳಿಂದ ಜನರು ಕಾತರದಿಂದ ಕಾಯುತ್ತಿದ್ದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ವಿಶ್ವಕಪ್ ನ ಮೊದಲ ಪಂದ್ಯಾಟವು ಇಂದು ಲಂಡನ್ ನಲ್ಲಿ ನಡೆಯುತ್ತಿದೆ. ಇಂದಿನ ಪಂದ್ಯಾಟದಲ್ಲಿ ಭರ್ಜರಿ 77 ರನ್ ಗಳಿಸಿದ್ದ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇದರೊಂದಿಗೆ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಅತ್ಯಂತ ವೇಗವಾಗಿ 11,000 ರನ್ ಗಳಿಸಿದ ದಾಖಲೆಯನ್ನ ನಿರ್ಮಿಸಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್, ಗಂಗೂಲಿ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ವಿರಾಟ್​ ಕೊಹ್ಲಿ 45ನೇ ಓವರ್​ನಲ್ಲಿ ಹಸನ್​ ಅಲಿ ಎಸೆದ ಬಾಲ್​ ಅನ್ನು ಬೌಂಡರಿಗಟ್ಟಿದರು. ಈ ಮೂಲಕ ಕೊಹ್ಲಿ 57 ರನ್​ ಗಳಿಸುತ್ತಿದ್ದಂತೆ ಕೇವಲ 222 ಇನಿಂಗ್ಸ್​ಗಳಲ್ಲಿ 11,000 ರನ್​ ಗಳಿಸಿದ ಸಾಧನೆ ಮಾಡಿದರು. ಇದಕ್ಕೂ ಮುನ್ನ ಈ ದಾಖಲೆ ಭಾರತದ ಮಾಜಿ ಆಟಗಾರ ಸಚಿನ್​ ತೆಂಡುಲ್ಕರ್​ ಅವರ ಹೆಸರಿನಲ್ಲಿತ್ತು. ಸಚಿನ್​ 276 ಇನಿಂಗ್ಸ್​ಗಳಲ್ಲಿ 11,000 ರನ್​ ಗಳಿಸಿದ ಸಾಧನೆ ಮಾಡಿದ್ದರು.

LEAVE A REPLY

Please enter your comment!
Please enter your name here