ಇಕ್ಕಟ್ಟಿನಲ್ಲಿ ಕೊಹ್ಲಿ! ಒಂದೇ ದಿನ ಎರಡು ಪಂದ್ಯ!! ಅವರ ಆಯ್ಕೆ ಯಾವ ಪಂದ್ಯ ಗೊತ್ತೇ?

0
3300

ನ್ಯೂಸ್ ಕನ್ನಡ ವರದಿ: ರನ್ ಮೆಷೀನ್ ಎಂದೇ ಹೆಸರುವಾಸಿಯಾಗಿ ದಾಖಲೆಗಳನ್ನು ಧೂಳಿಪಟ ಮಾಡುತ್ತಿರುವ ಭಾರತೀಯ ತಂಡದ ನಾಯಕ ವಿರಾಟ್ ಕೊಹ್ಲಿ ಇದೀಗ ಇಕ್ಕಟ್ಟಿನಲ್ಲಿದ್ದಾರೆ. ಒಂದೇ ದಿನ ಎರಡು ಮುಖ್ಯ ಪಂದ್ಯ ಇವರ ಮುಂದೆ ಇದೆ. ಆದರೆ ಯಾವುದರಲ್ಲಿ ಆಡುವುದು ಎಂದು ತಲೆಬಿಸಿ ಶುರುವಾಗಿದೆ ಭಾರತದ ಕಪ್ತಾನನಿಗೆ.

ಹೌದು ಇದು ತಮಾಷೆಯಲ್ಲ, ನಿಜ. ಇಂಗ್ಲೆಂಡ್ ಸರ್ರೆ ವೆಬ್ಸೈಟ್ ನಲ್ಲಿ ‘ಟೀಮ್ ಇಂಡಿಯಾ ಪ್ರವಾಸ ಸಂದರ್ಭ ಇಲ್ಲಿಗೆ ಆಗಮಿಸುವ ವಿರಾಟ್ ಕೊಹ್ಲಿ ಪಂದ್ಯ ನಡೆಯುವ ತಿಂಗಳಿನ ಉದ್ದಕ್ಕೂ ನಮ್ಮ ಜೊತೆಗಿರಲಿದ್ದಾರೆ’ ಎಂದಿದೆ. ಇತ್ತ ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿ ಐರ್ಲೆಂಡ್ ನಲ್ಲಿ ನಡೆಯಲಿರುವ ಟಿ20 ಕ್ರಿಕೆಟ್ ಗೆ ಕೊಹ್ಲಿಯನ್ನು ಆರಿಸಿದೆ. ಸರ್ರೆ ಪಂದ್ಯಾಟ ಜೂನ್ 25ರಿಂದ 28ರ ವರೆಗೆ ನಡೆಯಲಿದ್ದರೆ, ಐರ್ಲೆಂಡ್ ಪಂದ್ಯಾಟ ಜೂನ್ 27ರಿಂದ 29ರ ವರೆಗೆ ನಡೆಯಲಿದೆ. ಹಾಗಾದರೆ ವಿರಾಟ್ ಯಾವುದರಲ್ಲಿ ಪಾಲ್ಗೊಳ್ಳಬೇಕು?!

ಎರಡೂ ಸ್ಥಳಗಳಿಗೂ ಸಾವಿರಾರು ಮೈಲುಗಟ್ಟರೆ ದೂರವಿರುವಾಗ ಕೊಹ್ಲಿ ಯಾವ ಪಂದ್ಯದಲ್ಲೀಂತ ಭಾಗವಹಿಸಿಯಾರು? ಭಾರತೀಯ ಆಯ್ಕೆ ಸಮಿತಿ ಕೊಹ್ಲಿಯನ್ನು ಆರಿಸುವಾಗ ಏನನ್ನು ತಲೆಯಲ್ಲಿಟ್ಟುಕೊಂಡು ಆರಿಸಿಯೋ ಆ ದೇವರೇ ಬಲ್ಲ. ಅಂತೂ ಕೊಹ್ಲಿಯ ಪಾಡೀಗ ಆಚೂ ಅಲ್ಲ-ಈಚೂ ಅಲ್ಲ ಅನ್ನುವಂತಾಗಿದೆ. ಮುಂದೆ ಏನು ಮಾಡುತ್ತಾರೋ ಅದು ಕೊಹ್ಲಿಗೇ ಗೊತ್ತು!. ಆದರೆ ಮಾಹಿತಿಯೊಂದರ ಪ್ರಕಾರ ಕೊಹ್ಲಿ ಮೊದಲ ಐರ್ಲೆಂಡ್ ಟಿ20 ಪಂದ್ಯವನ್ನು ಆಡದೆ ನಾಲ್ಕು ದಿನಗಳ ಸರ್ರೆ ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಎರಡನೇ ಐರ್ಲೆಂಡ್ ಟಿ20ಯಲ್ಲಿ ಪಾಲ್ಗೊಳ್ಳುತ್ತಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here