ಪೌರತ್ವ ಕಾಯ್ದೆಯಿಂದ ಸಂವಿಧಾನ: ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಕೇರಳ ಸರ್ಕಾರ

0
11

ನ್ಯೂಸ್ ಕನ್ನಡ ವರದಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಸಂವಿಧಾನ, ಜಾತ್ಯಾತೀತತೆ ಉಲ್ಲಂಘನೆಯಾಗಿದೆ ಎಂದು ಹೇಳಿರುವ ಕೇರಳ ಸರ್ಕಾರ ಮಂಗಳವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

ಪೌರತ್ವ ಕಾಯ್ದೆ ಜಾರಿ ಸಂವಿಧಾನದ ವಿಧಿ 14, 21 ಮತ್ತು 25ನ್ನು ಉಲ್ಲಂಘನೆ ಮಾಡಿದಂತಾಗಿದೆ. ಅಲ್ಲದೆ, ಭಾರತ ಸಂವಿಧಾನದ ಜಾತ್ಯಾತೀತತೆಯ ಮೂಲತತ್ವಗಳ ವಿರುದ್ಧವಾಗಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.

ಪೌರತ್ವ ಕಾಯ್ದೆ ವಿರುದ್ಧ ನಿನ್ನೆಯಷ್ಟೇ ರ್ಯಾಲಿ ನಡೆಸಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇರಳ ರಾಜ್ಯದಲ್ಲಿ ಜಾರಿಯಾಗಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು.

LEAVE A REPLY

Please enter your comment!
Please enter your name here