ಅಬುದಾಭಿಯಲ್ಲಿ ಕ್ರಿಕೆಟ್ ಆಡಿದ್ದಕ್ಕಾಗಿ ಕೆಕೆಆರ್ ತಂಡದ ಆಟಗಾರನನ್ನು ನಿಷೇಧಿಸಿದ ಬಿಸಿಸಿಐ!! ಯಾರಾತ ಗೊತ್ತೇ?

0
1619

ನ್ಯೂಸ್ ಕನ್ನಡ ವರದಿ: ತಮ್ಮ ಒಪ್ಪಂದದ ಅಡಿಯಲ್ಲಿ ಬರುವ ಆಟಗಾರರ ಬಗ್ಗೆ ಬಹಳಷ್ಟು ಕಟ್ಟನಿಟ್ಟಿನ ನಿಗಾ ಇಟ್ಟಿರುವ ಬಿಸಿಸಿಐ ಇದೀಗ ಒಬ್ಬ ಆಟಗಾರನನ್ನು ನಿಷೇಧಿಸಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಬುಧಾಬಿಯಲ್ಲಿ ಮಾನ್ಯತೆ ಇಲ್ಲದ ಟಿ20 ಲೀಗ್‌ನಲ್ಲಿ ಆಡಿದ ಉತ್ತರ ಪ್ರದೇಶ, ಕೆಕೆಆರ್‌ ತಂಡದ ಆಲ್ರೌಂಡರ್‌ ರಿಂಕು ಸಿಂಗ್‌ಗೆ ಬಿಸಿಸಿಐ 3 ತಿಂಗಳ ನಿಷೇಧ ಹೇರಿದೆ. ಭಾರತ ‘ಎ’ ತಂಡದಿಂದಲೂ ಅವರನ್ನು ಹೊರಹಾಕಲಾಗಿದೆ. ಜೂ.1ರಿಂದ ಅವರ ನಿಷೇಧ ಅವಧಿ ಆರಂಭಗೊಳ್ಳಲಿದೆ.

ಯುಎಈಯ ರಾಜಧಾನಿ ಅಬುದಾಬಿಯಲ್ಲಿ ರಂಜಾನ್ ತಿಂಗಳಿನಲ್ಲಿ ನಡೆಯುವ ಪ್ರಸಿದ್ಧ ರಂಜಾನ್ ಟಿ20 ಲೀಗ್ ನಲ್ಲಿ ಡೆಕನ್ ಗ್ಲಾಡಿಯೇಟರ್ ತಂಡವನ್ನು ಪ್ರತಿನಿಧಿಸಿದ್ದ ರಿಂಕು 58 ಎಸೆತಗಳಲ್ಲಿ 104 ರನ್ ಬಾರಿಸಿದ್ದರು. ಇನ್ನು ಬೌಲಿಂಗ್’ನಲ್ಲಿ ನ್ಯೂ ಮೆಡಿಕಲ್ ಸೆಂಟರ್ ತಂಡದ ವಿರುದ್ಧ 2 ವಿಕೆಟ್ ಪಡೆದು ಗಮನ ಸೆಳೆದಿದ್ದರು.

LEAVE A REPLY

Please enter your comment!
Please enter your name here