ಐಪಿಎಲ್ 2018: ಹೈದರಾಬಾದ್ ತಂಡದ ವಿರುದ್ಧ ಸಾಧಾರಣ ಮೊತ್ತ ದಾಖಲಿಸಿದ ಕೆಕೆಆರ್!

0
349

ನ್ಯೂಸ್ ಕನ್ನಡ ವರದಿ-(14.04.18): ಇಂಡಿಯನ್ ಪ್ರೀಮಿಯರ್ ಲೀಗ್ ನ 10 ನೇ ಪಂದ್ಯಾಟವು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮಳೆಯ ಅಡ್ಡಿಯ ನಡುವೆಯೂ ಪಂದ್ಯವು ಪುನರಾರಂಭಗೊಂಡಿದೆ. ಟಾಸ್ ಗೆದ್ದ ಹೈದರಾಬಾದ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಇದೀಗ 20 ಓವರ್ ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 138 ರನ್ ದಾಖಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ತಂಡವು ಆರಂಭದಲ್ಲೇ ರಾಬಿನ್ ಉತ್ತಪ್ಪ ವಿಕೆಟ್ ಕಳೆದುಕೊಂಡಿತು. ಬಳಿಕ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಕ್ರಿಸ್ ಲಿನ್(49) ಹಾಗೂ ನಿತೀಶ್ ರಾಣಾ ರನ್ ಗಳಿಸಲು ಸಹಕಾರಿಯಾದರು. ಮಧ್ಯದಲ್ಲೆ ಮಳೆಯ ಅಡಚಣೆಯಿಂದಾಗಿ ಕೆಲಕಾಲ ಪಂದ್ಯ ಸ್ಥಗಿತಗೊಂಡಿತ್ತು. ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟ್ಸ್ ಮನ್ ಸುನೀಲ್ ನರೈನ್ ವಿಫಲರಾದರು. ನಾಯಕ ದಿನೇಶ್ ಕಾರ್ತಿಕ್ 29 ರನ್ ಗಳಿಸಿದರು. ಸನ್ ರೈಸರ್ಸ್ ಪರ ಬೌಲಿಂಗ್ ನಲ್ಲಿ ಭುವನೇಶ್ವರ್ ಕುಮಾರ್, ಶಕೀಬ್ ಉಲ್ ಹಸನ್ ಮಿಂಚಿದರು.

LEAVE A REPLY

Please enter your comment!
Please enter your name here