ಸಿದ್ಧಾರ್ಥ ವಿದ್ಯಾ ಸಂಸ್ಥೆ ಪರಮೇಶ್ವರ್ ತಂದೆಯವರದ್ದು, ಐಟಿಯವರು ಕೈ ಹಾಕಿದ್ದು ಸರಿಯಲ್ಲ: ಕೆ.ಎಚ್.ಮುನಿಯಪ್ಪ

0
209

ನ್ಯೂಸ್ ಕನ್ನಡ ವರದಿ: ಕಾಂಗ್ರೆಸ್ ಮುಖಂಡರ ಸಂಸ್ಥೆಗೆ ಐಟಿಯವರು ಕೈ ಹಾಕಿದ್ದಾರೆ, ಇದು ಸರಿಯಲ್ಲ ಅಂತಾ ಕೇಂದ್ರ ಮಾಜಿ ಸಚಿವ ಕೆ.ಎಚ್ ಮುನಿಯಪ್ಪ ಹೇಳಿದ್ದಾರೆ.

ಡಾ.ಜಿ ಪರಮೇಶ್ವರ್ ಭೇಟಿ ಬಳಿಕ ಮಾತನಾಡಿದ ಅವರು, ಜಿ. ಪರಮೇಶ್ವರ್ ತಂದೆ ಗಂಗಾಧರಯ್ಯ ಸೇವಾ ಮನೋಭಾವದಿಂದ ಬಹಳ ಕಷ್ಟ ಪಟ್ಟು ಸಿದ್ಧಾರ್ಥ ವಿದ್ಯಾ ಸಂಸ್ಥೆ ಕಟ್ಟಿದ್ದಾರೆ. ದಲಿತ ಅನ್ನೋ ಕಾರಣಕ್ಕೆ ಅವರ ಮೇಲೆ ದಾಳಿ ಮಾಡಿದ್ದಾರೆ. ಒಬ್ಬ ದಲಿತರ ಸಂಸ್ಥೆ ಇದು.. ಇದರ ಮೇಲೆ ಕಣ್ಣು ಹಾಕಿದ್ದು ಸರಿಯಲ್ಲ. ಯುಪಿಎ ಸರ್ಕಾರ ಕೂಡ ಆಡಳಿತ ನಡೆಸಿದೆ. ಆದರೆ ಇಂತಹ ಕೆಟ್ಟ ತೀರ್ಮಾನವನ್ನ ನಾವು ಯಾವತ್ತೂ ಮಾಡಿಲ್ಲ ಅಂತಾ ಹೇಳಿದ್ರು.

LEAVE A REPLY

Please enter your comment!
Please enter your name here