ಭಾರತ ತಂಡದ ಸೋಲಿಗೆ ಕಾರಣ ಇವರೇನಾ? ಹೊರಬಿದ್ದ ಶಾಕಿಂಗ್ ವಿಡಿಯೋ ವೀಕ್ಷಿಸಿ

0
2590

ಟೀಂ ಇಂಡಿಯಾ ಸೆಮಿ ಫೈನಲ್​ನಲ್ಲಿ ಸೋತು ಟೂರ್ನಿಯಿಂದ ಹೊರ ಬಿದ್ದಿದೆ. ಇದರ ಬೆನ್ನಲ್ಲೇ ನಾಯಕ ಮತ್ತು ಕೋಚ್ ನಡುವೆ ಎಲ್ಲವೂ ಸರಿ ಇಲ್ಲ ಅನ್ನುವುದು ಇದೀಗ ಬೆಳಕಿಗೆ ಬಂದಿದೆ.

ನ್ಯೂಜಿಲೆಂಡ್​ ವಿರುದ್ಧದ ಸೆಮಿಫೈನಲ್​ನಲ್ಲಿ ಟೀಂ ಇಂಡಿಯಾ ಸೋಲಿಗೆ ಭಾರತ ತಂಡದ ಕೋಚ್ ರವಿಶಾಸ್ತ್ರಿ ಕಾರಣ ಎನ್ನಲಾಗುತ್ತಿದೆ. ನಾಯಕನ ಗಮನಕ್ಕೆ ತರದೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೋಚ್ ಬದಲಾವಣೆ ಮಾಡಿರುವುದು ವಿಶ್ವಕಪ್​ ಟೂರ್ನಿಯಿಂದ ಭಾರತ ಹೊರ ಬೀಳಲು ಕಾರಣ. ಹೀಗಾಗಿ ಪಂದ್ಯದ ಬಳಿಕ ಕ್ಯಾಪ್ಟನ್ ಕೊಹ್ಲಿ ಹಾಗೂ ರವಿಶಾಸ್ತ್ರಿ ನಡುವೆ ವಾಗ್ವಾದ ನಡೆದಿದೆ ಎಂದು ಹೇಳಲಾಗುತ್ತಿದೆ.

ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಪೆವಿಲಿಯನ್​ಗೆ ಮರಳುತ್ತಿದ್ದಂತೆ ಕೋಚ್ ರಿಷಭ್ ಪಂತ್​ರನ್ನು ನಾಲ್ಕನೇ ಕ್ರಮಾಂಕದಲ್ಲಿ ಕಳುಹಿಸಿದ್ದರು. ಕೊಹ್ಲಿ ಔಟಾಗಿ ಬರುತ್ತಿದ್ದಂತೆ ಯುವ ಆಟಗಾರ ಪಂತ್​ ಬ್ಯಾಟಿಂಗ್​ಗೆ ಇಳಿದಿದ್ದರು. ಇದನ್ನು ನೋಡಿದ ಟೀಂ ಇಂಡಿಯಾ ನಾಯಕನಿಗೆ ಪಿತ್ತನೆತ್ತಿಗೇರಿದೆ ಎನ್ನಲಾಗಿದೆ.

ಏಕೆಂದರೆ ಈ ಕ್ರಮಾಂಕದಲ್ಲಿ ಪಂತ್ ಬ್ಯಾಟ್​ ಮಾಡುವುದು ಕೊಹ್ಲಿಗೆ ಇಷ್ಟವಿರಲಿಲ್ಲ. ಅದರಲ್ಲೂ ಸಂಕಷ್ಟದ ಸಂದರ್ಭದಲ್ಲಿ ಅನುಭವಿ ಆಟಗಾರನಿಗೆ ಆದ್ಯತೆ ನೀಡಬೇಕಾಗಿತ್ತು ಎಂಬುದು ಕೊಹ್ಲಿಯ ವಾದವಾಗಿತ್ತು ಎಂದು ತಿಳಿದು ಬಂದಿದೆ. ಅಂದರೆ ಟೀಂ ಇಂಡಿಯಾ ನಾಯಕನ ಪ್ರಕಾರ ಧೋನಿಯನ್ನು ಕಣಕ್ಕಿಳಿಸಬೇಕಿತ್ತು.

ಕಡಿಮೆ ಓವರ್​ನಲ್ಲಿ ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ವಿಕೆಟ್ ಕಾಯ್ದುಕೊಳ್ಳುವ ಅವಶ್ಯಕತೆಯಿತ್ತು. ಆದರೆ ಪಂತ್ ತಾಳ್ಮೆ ಇಲ್ಲದೆ ಬ್ಯಾಟ್​ ಬೀಸಿ ವಿಕೆಟ್ ಕೈಚೆಲ್ಲಿದ್ದರು. ಪಂತ್ ಔಟಾಗಿ ಪೆವಿಲಿಯನ್ ಕಡೆ ಬರುತ್ತಿದ್ದಂತೆ ರವಿ ಶಾಸ್ತ್ರಿ ಬಳಿ ತೆರಳಿದ ಕೊಹ್ಲಿ ವಾಗ್ವಾದಲ್ಲಿ ತೊಡಗಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಾಗೆಯೇ ಕೋಚ್ ನಿರ್ಧಾರದಿಂದ ನಾಯಕ ಸಂತುಷ್ಟನಾಗಿರಲಿಲ್ಲ ಎಂಬುದು ಈ ವಿಡಿಯೋದಿಂದ ತಿಳಿದು ಬಂದಿದೆ.

ಇನ್ನು ಟೀಂ ಇಂಡಿಯಾದ ಸೋಲಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಮಾಡಿಕೊಂಡ ಎಡವಟ್ಟು ಮುಖ್ಯ ಕಾರಣ ಎಂದು ಮಾಜಿ ಆಟಗಾರರು ಅಭಿಪ್ರಾಯ ಪಟ್ಟಿದ್ದಾರೆ. ಸಚಿನ್, ಗಂಗೂಲಿ, ಲಕ್ಷ್ಮಣ್ ಸೇರಿದಂತೆ ಅನೇಕ ದಿಗ್ಗಜರು 4ನೇ ಕ್ರಮಾಂಕದಲ್ಲಿ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಮಾಡಿದ್ದರೆ ಭಾರತ ಗೆಲ್ಲುವ ಸಾಧ್ಯತೆಯಿತ್ತು ಎಂದು ತಿಳಿಸಿದ್ದಾರೆ. ಇಲ್ಲಿ ಅನುಭವಕ್ಕೆ ಮಣೆ ಹಾಕದಿರುವುದೇ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here