ನಾವು ನಲುವತ್ತಕ್ಕಿಂತ ಜಾಸ್ತಿ ಸ್ಥಾನ ಗೆದ್ದರೆ ಮೋದಿ ವಿಜಯ್ ಚೌಕದಲ್ಲಿ ನೇಣು ಹಾಕಿಕೊಳ್ಳುತ್ತಾರಾ?: ಮಲ್ಲಿಕಾರ್ಜುನ ಖರ್ಗೆ

0
216

ನ್ಯೂಸ್ ಕನ್ನಡ ವರದಿ(13.5.19): ಪ್ರಧಾನಿ ಮೋದಿ ಎಲ್ಲಿಗೆ ಹೋದರೂ ಕಾಂಗ್ರೆಸ್ 40ಕ್ಕಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಖಡಕ್ ಆಗಿಯೇ ಮೋದಿಯವರಿಗೆ ಟಾಂಗ್ ನೀಡಿದ್ದಾರೆ. 17ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 40ಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ವಿಜಯ್ ಚೌಕದಲ್ಲಿ ನೇಣು ಹಾಕಿಕೊಳ್ಳುತ್ತಾರಾ? ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

ಮೋದಿ ಕುರಿತ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಮಲ್ಲಿಕಾರ್ಜುನ ಖರ್ಗೆ ಅವರು ನರೇಂದ್ರ ಮೋದಿ ಅವರ ಕ್ಷಮೆಯಾಚಿಸಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಖರ್ಗೆ ಅವರು, “ಮೋದಿ ಮಾತುಗಳನ್ನು ನೀವು ನಂಬುತ್ತೀರಾ? ಒಂದು ವೇಳೆ ಕಾಂಗ್ರೆಸ್ ಪಕ್ಷ 40 ಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ಪಡೆದರೆ ಮೋದಿ ದೆಹಲಿಯ ವಿಜಯ್ ಚೌಕದಲ್ಲಿ ನೇಣು ಹಾಕಿಕೊಳ್ಳುತ್ತಾರಾ” ಎಂದಿದ್ದರು.

LEAVE A REPLY

Please enter your comment!
Please enter your name here