ಕಾಂಗ್ರೆಸ್ ನವರೇನು ಪಾಕಿಸ್ತಾನದವರೇ?: ಮಲ್ಲಿಕಾರ್ಜುನ ಖರ್ಗೆ ಕಿಡಿ

0
633

ನ್ಯೂಸ್ ಕನ್ನಡ ವರದಿ : ಈಗಾಗಲೇ ಚುನಾವಣಾ ಎದುರಿಸಿರುವ ರಾಜಕೀಯ ನಾಯಕರು ತಮ್ಮ ಸಿಡಿಮಿಡಿಯನ್ನು ಒಂದಲ್ಲ ಒಂದು ರೀತಿಯಲ್ಲಿ ಎಲ್ಲರ ಮುಂದೆ ತೋರುತ್ತಿದ್ದಾರೆ. ಸೇಡಂ ಪಟ್ಟಣದ ಎಪಿಎಂಸಿ ನೂತನ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಮಲ್ಲಿಕಾರ್ಜುನ್‌ ಖರ್ಗೆ ”ಜಾತಿ, ಧರ್ಮ ಹಾಗೂ ಪಾಕಿಸ್ತಾನ ಹೆಸರಲ್ಲಿ ವಿಷ ಬೀಜ ಬಿತ್ತಿ ಜನರ ಕಣ್ಣಿಗೆ ಮಂಕುಬೂದಿ ಎರಚಿ ಮತ ಪಡೆಯುವುದನ್ನೇ ಕೆಲವರು ಕಾಯಕ ಮಾಡಿಕೊಂಡಿದ್ದಾರೆ,”ಎಂದು ಆರೋಪಿಸಿದರು.

ನಾವೂ ದೇಶಭಕ್ತರೇ, ನಾವೂ ಪಾಕಿಸ್ತಾನದ ವಿರುದ್ಧ ಸಮರ ಸಾರಿದ್ದೇವೆ. ಕಾಂಗ್ರೆಸ್‌ ನವರೆಲ್ಲಾ ಪಾಕಿಸ್ತಾನದವರಾ ಎಂದು ಆಕ್ರೋಶ ತುಂಬಿದ ವಾಗ್ದಾಳಿ ನಡೆಸಿದರು. ಧರ್ಮದ ಹೆಸರಲ್ಲಿ ದೇಶ ಇಬ್ಭಾಗ ಮಾಡುವ ಹುನ್ನಾರ ನಡೆಯುತ್ತಿದೆ. ದೇಶಕ್ಕೆ ಶಾಶ್ವತ ವಿಚಾರಗಳ ಅವಶ್ಯಕತೆ ಇದೆ. ಜನರು ಇನ್ನಾದರೂ ಜಾಗೃತಗೊಳ್ಳಬೇಕಾದ ಅಗತ್ಯತೆ ಇದೆ ಎಂದರು. ಇವಿಎಂ ಮೇಲೆ ನನಗೆ ಅನುಮಾನವಿಲ್ಲ. ಆದರೆ ದೇಶದ ಜನತೆ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು

LEAVE A REPLY

Please enter your comment!
Please enter your name here