ದಲಿತ ಎಂಬ ಕಾರಣಕ್ಕೆ ಸಿಎಂ ಪದವಿ ಕೇಳಲ್ಲ, ಕೊಡುವುದು ನನಗೆ ಬೇಕಾಗಿಲ್ಲ!: ಮಲ್ಲಿಕಾರ್ಜುನ ಖರ್ಗೆ

0
1465

ನ್ಯೂಸ್ ಕನ್ನಡ ವರದಿ : ಮತದಾನ ಮುಗಿದ ಒಂದೇ ದಿನದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ದಲಿತ ಸಿಎಂ ಕೂಗು ಕೇಳಿ ಬಂದಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಧ್ವನಿಗೂಡಿಸಿದ್ದಾರೆ. ಈ ಕುರಿತು ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಥವಾ ಕಾರ್ಯಕರ್ತ ಎಂದು ನನಗೆ ಸಿಎಂ ಸ್ಥಾನ ಕೊಡಲಿ. ಆದರೆ ದಲಿತ ಎಂಬ ಕಾರಣಕ್ಕೆ ಸಿಎಂ ಪದವಿ ಕೊಡುವುದು ಬೇಕಾಗಿಲ್ಲ. ನಾನು ಯಾವತ್ತೂ ದಲಿತ ಸಿಎಂ ಅಂತಾ ಅರ್ಜಿ ಹಾಕಿಲ್ಲ. ಹಾಕುವುದೂ ಇಲ್ಲವೆಂದು ಸ್ಪಷ್ಟಪಡಿಸಿದರು.

ಹೈಕಮಾಂಡ್ ಹೇಳಿದರೆ ದಲಿತ ಸಿಎಂಗೆ ಅವಕಾಶ ನೀಡಲಾಗುವುದು ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕಲಬುರ್ಗಿಯಲ್ಲಿ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ. ಹೀಗಾಗಿ ಹಿರಿಯ ನಾಯಕ ಅಂತಾನೋ ಅಥವಾ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತ ಅಂತಾನೇ ಸಿಎಂ ಪದವಿ ಕೊಡಲಿ. ಅದೆಲ್ಲವನ್ನೂ ಬಿಟ್ಟು ದಲಿತ ಸಿಎಂ ಚರ್ಚೆ ಅಪ್ರಸ್ತುತ ಎಂದರು. ಒಟ್ಟಿನಲ್ಲಿ ಮೇ 15 ರ ಫಲಿತಾಂಶದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಯಾವೆಲ್ಲಾ ಬದಲಾವಣೆಗಳು ಆಗುತ್ತವೆ ಅನ್ನೋದು ಕುತೂಹಲ ಮೂಡಿಸಿದೆ.

LEAVE A REPLY

Please enter your comment!
Please enter your name here