ಆರಂಭವಾದ ಕೆಜಿಎಫ್-2 ಚಿತ್ರೀಕರಣ; ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಾ ಇರುವ ಫೋಟೊಗಳು

0
131

ನ್ಯೂಸ್ ಕನ್ನಡ ವರದಿ (14-5-2019): ಕೆಜಿಎಫ್ ಸಿನಿಮಾ ಇತಿಹಾಸದಲ್ಲಿ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಇಂಥಾ ಚಿತ್ರದ ಚಾಪ್ಟರ್ 2 ಶುರುವಾಗುತ್ತದೆಯೆಂದರೆ ಅದರತ್ತಲೂ ತೀವ್ರವಾದ ಕುತೂಹಲ ಹುಟ್ಟಿಸಿದೆ.ಚಿತ್ರೀಕರಣ ಯಾವಾಗ ಶುರುವಾಗುತ್ತದೆ ಎಂಬ ಕುತೂಹಲ ಕೂಡಾ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಇದೀಗ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣಕ್ಕೆ ವಿಧ್ಯುಕ್ತ ಚಾಲನೆ ಸಿಕ್ಕಿದೆ.

ಪ್ರಶಾಂತ್ ನೀಲ್ ಹಾಗೂ ಛಾಯಾಗ್ರಾಹಕ ಭುವನ್ ಗೌಡ ಬೆಂಗಳೂರಿನಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ. ಚಾಪ್ಟರ್ 1ಗೆ ಸುಮಾರು ಎರಡು ವರ್ಷ ಚಿತ್ರೀಕರಣ ನಡೆದಿತ್ತು. ಆದರೆ ಈ ಬಾರಿ ಮಾತ್ರ ಪ್ರೇಕ್ಷಕರ ನಿರೀಕ್ಷೆಯನ್ನೂ ಮೀರಿ ಆದಷ್ಟು ಬೇಗನೆ ಚಿತ್ರೀಕರಣ ಮುಗಿಸಲು ಪ್ರಶಾಂತ್ ನೀಲ್ ನೀಲನಕ್ಷೆ ಸಿದ್ಧಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆಯಾದರೂ ಸದ್ಯದಲ್ಲಿಯೇ ಚಿತ್ರತಂಡ ಕರಾವಳಿಯ ಸುಂದರ ತಾಣಗಳತ್ತ ಹೊರಳಿಕೊಳ್ಳಲಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here