ಶಾಸಕ ಸುನೀಲ್ ಕುಮಾರ್ ಕಟ್ಟಡದಲ್ಲಿ ಸರ್ಕಾರಿ ಸಿಮೆಂಟ್ ಪತ್ತೆ!; ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಕಾರ್ಕಳದ ಶಾಸಕ.?

0
67

ನ್ಯೂಸ್ ಕನ್ನಡ ವರದಿ: ಉಡುಪಿ ಜಿಲ್ಲೆಯ ಕಾರ್ಕಳ ಶಾಸಕ ಸರ್ಕಾರದ ಮುಖ್ಯ ಸಚೇತಕ ಸುನೀಲ್ ಕುಮಾರ್ ಮೇಲೆ ಸಿಮೆಂಟ್ ಕಿಕ್ ಬ್ಯಾಕ್ ಆರೋಪ ಕೇಳಿಬಂದಿದೆ.

ಶಾಸಕ ಸುನೀಲ್ ಕುಮಾರ್, ಕಾರ್ಕಳದಲ್ಲಿ ತಮ್ಮ ಖಾಸಗಿ ಜಮೀನಿನಲ್ಲಿ ಬಹು ಮಹಡಿಯ ಕಚೇರಿಯನ್ನ ನಿರ್ಮಾಣ ಮಾಡುತ್ತಿದ್ದು, ಈ ಕಛೇರಿಯ ನಿರ್ಮಾಣಕ್ಕೆ ಸರ್ಕಾರಿ ಕಾಮಗಾರಿಯ ಗುತ್ತಿಗೆ ನೀಡಿರುವ ಕಾಂಟ್ರಾಕ್ಟರ್‌ಗಳಿಂದ ಅಲ್ಟ್ರಾ ಟೆಕ್ ಕಂಪನಿಯ ನಾಟ್ ಫಾರ್ ಸೇಲ್ ಎಂದು ನಮೂದಿಸಿರುವ ನೂರಾರು ಗೋಣಿ ಸಿಮೆಂಟ್ ಚೀಲಗಳನ್ನ ಕಿಕ್ ಬ್ಯಾಕ್ ಪಡೆದ ಆರೋಪವನ್ನ ಕಾರ್ಕಳ ಕಾಂಗ್ರೆಸ್ ಮಾಡಿದೆ. ಇದಲ್ಲದೆ ಈಗ ಸಾಮಾಜಿಕ ಜಾಲತಾಣ ತುಂಬಾ ಶಾಸಕರ ಈ ಕಾರ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ವೀಡಿಯೋಗಳನ್ನ ರಿಲೀಸ್ ಮಾಡಿರುವ ಕಾಂಗ್ರೆಸ್ಸಿನವರು, ಸರ್ಕಾರಿ ವ್ಯವಸ್ಥೆಗಳನ್ನು ದುರುಪಯೋಗಪಡಿಸಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಲೋಕಾಯುಕ್ತರಿಗೆ ದೂರು ನೀಡಲು ಕಾರ್ಕಳ ಕಾಂಗ್ರೆಸ್ ನಿರ್ಧರಿಸಿದೆ. ಶಾಸಕ ಸುನೀಲ್ ಕುಮಾರ್ ಮೇಲೆ ಭ್ರಷ್ಟಾಚಾರದ ಆರೋಪ ಹೊರಡಿಸಿ, ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಿದೆ.

ಶಾಸಕ ಸುನಿಲ್ ಕುಮಾರ್ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದ್ದಾರೆ, ಸರ್ಕಾರಿ ವ್ಯವಸ್ಥೆಗಳನ್ನು ದುರುಪಯೋಗಪಡಿಸಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಲೋಕಾಯುಕ್ತರಿಗೆ ದೂರು ನೀಡಲು ಕಾರ್ಕಳ ಕಾಂಗ್ರೆಸ್ ನಿರ್ಧರಿಸಿದೆ.

ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕೆಂದು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here