ಬಿಜೆಪಿ ನಮ್ಮ ಶಾಸಕರಿಗೆ 10 ಕೋಟಿ ರೂ. ಆಮಿಷವೊಡ್ಡುತ್ತಿದೆ: ದೆಹಲಿ ಸಿಎಂ ಕೇಜ್ರೀವಾಲ್

0
147

ನ್ಯೂಸ್ ಕನ್ನಡ ವರದಿ (02.5.19): ಕೇಂದ್ರ ಸರಕಾರದ ವಿರುದ್ಧ ಹರಿಹಾಯುತ್ತಾ ಇರುವ ಻ರವಿಂದ್ ಕೇಜ್ರೀವಾಲ್ ಅವರು ಈಗ ಬಿಜೆಪಿ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಬಿಜೆಪಿಯು ಆಮ್ ಆದ್ಮಿ ಪಕ್ಷದ ಏಳು ಶಾಸಕರಿಗೆ ತಲಾ 10 ಕೋಟಿ ರೂ.ಗಳ ಆಮಿಷವೊಡ್ಡಿ ಅವರನ್ನು ಖರೀದಿಸಲು ಯತ್ನಿಸಿದೆ ಎಂದು ಅರವಿಂದ್ ಕೇಜ್ರಿವಾಲ್ ದೂರಿದ್ದಾರೆ.

“ಕಳೆದ ಮೂರು ದಿನಗಳಲ್ಲಿ ಎಎಪಿಯ ಏಳು ಶಾಸಕರು ಬಂದು ನನ್ನ ಬಳಿ ಹೇಳಿದ್ದಾರೆ. ಬಿಜೆಪಿಯು ಅವರಿಗೆ ತಲಾ 10 ಕೋಟಿ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿ, ಬಿಜೆಪಿಗೆ ಸೇರುವಂತೆ ಒತ್ತಾಯಿಸಿದೆ. ಅವರು ನಮ್ಮ ಶಾಸಕರಲ್ಲಿ ಒಡಕು ಮೂಡಿಸುತ್ತಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಪ್ಪುವುದಿಲ್ಲ. ಕಳೆದ ಒಂದೆರಡು ದಿನಗಳ ಹಿಂದಷ್ಟೇ ‘ನಾವು ನಲವತ್ತು ಶಾಸಕರನ್ನು ಖರೀದಿಸಿ ಮಮತಾ ಬ್ಯಾನರ್ಜಿ ಸರ್ಕಾರ ಬೀಳುವಂತೆ ಮಾಡುತ್ತೇವೆ’ ಎಂದು ಪ್ರಧಾನಿ ಮೋದಿ ಹೇಳಿದ್ದರು. ಇಂಥ ಮಾತುಗಳು ಅವರ ಹುದ್ದೆಗಲ್ಲ” ಎಂದು ಕೇಜ್ರಿವಾಲ್ ಹೇಳಿದರು. ಮಾತು ಮುಂದುವರೆಸುತ್ತಾ “ಜನರು ಎಎಪಿಯ ಕೆಲಸ ನೋಡಿ ಮತ ಹಾಕುತ್ತಾರೆ. ನಾವು ದೆಹಲಿಯಲ್ಲಿ ಉತ್ತಮ ಕೆಲಸ ಮಾಡಿದ್ದೇವೆ. ಮೋದಿ ತಮ್ಮ ಹೆಸರಿನ ಮೂಲಕ ಮತ ಕೇಳಬಹುದು. ನಾವು ಅಭಿವೃದ್ಧಿಯ ಹೆಸರಿನಲ್ಲಿ ಮತ ಕೇಳುತ್ತೇವೆ” ಎಂದು ಕೇಜ್ರಿವಾಲ್ ಟಾಂಗ್ ನೀಡಿದರು.

ಇನ್ನು ಈ ಬಗ್ಗೆ ಭಾರತೀಯ ಜನತಾ ಪಕ್ಷದಿಂದ ಯಾವುದೇ ಅಧಿಕೃತ ಹೇಳಿಕೆಗಳು ಲಭ್ಯವಾಗಿಲ್ಲ. ಹಾಗೂ ಚುನಾವಣಾ ಸಮಯದಲ್ಲಿ ಈ ತರಹದ ಗಂಭೀರ ಆರೋಪಗಳು ಬಿಜೆಪಿಗೆ ಮತ ತರುವಲ್ಲಿ ಹೇಗೆ ಪ್ರಭಾವ ಬೀರಲಿದೆ ಎಂದು ಕಾದುನೋಡಬೇಕಿದೆ.

LEAVE A REPLY

Please enter your comment!
Please enter your name here