370 ವಿಧಿ ರದ್ದು: ಬುಗಿಲೇಳುತ್ತಿದೆ ಶ್ರೀನಗರದಲ್ಲಿ ಪ್ರತಿಭಟನೆ, ಪೋಲಿಸರ ನಡುವೆ ಘರ್ಷಣೆ! ಸುದ್ದಿ ಓದಿ

0
2441

ನ್ಯೂಸ್ ಕನ್ನಡ ವರದಿ: ಸಂವಿಧಾನದ 370 35 ಎ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ವಿರುದ್ಧ ಶ್ರೀನಗರದಲ್ಲಿ ಶುಕ್ರವಾರ ಭಾರಿ ಪ್ರತಿಭಟನೆ ನಡೆದಿದೆ. ಈ ವೇಳೆ ಪ್ರತಿಭಟನಕಾರರು ಮತ್ತು ಪೋಲಿಸರ ನಡುವೆ ಸಂಘರ್ಷ ನಡೆದಿದೆ.

ಪ್ರತಿಭಟನಕಾರರು ಸೌರಾ ಪ್ರದೇಶದಿಂದ ಶ್ರೀನಗರದ ಕೇಂದ್ರ ಭಾಗದತ್ತ ಮೆರವಣಿಗೆ ನಡೆಸಲು ಮುಂದಾದರು. ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ ಸಾವಿರಾರು ಜನ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪ್ರತಿಭಟನಾ ಮೆರವಣಿಗೆಗಳಲ್ಲಿ ಅವರನ್ನು ಚದುರಿಸಲು ಭದ್ರತಾ ಪೋಲಿಸರು ಅಶ್ರುವಾಯು ಷೆಲ್ ಸಿಡಿಸಿದರು. ಪೆಲೆಟ್‌ ಗುಂಡುಗಳನ್ನು ಹಾರಿಸಿದರು. ಆದರೆ ಪೊಲೀಸರ ದಾಳಿಯಿಂದ ತಪ್ಪಿಸಿಕೊಳ್ಳಲು ಜನರು ಸಿದ್ಧವಾಗಿಯೇ ಬಂದಿದ್ದರು. ಜನರು ಎಣ್ಣೆಯ ಕ್ಯಾನ್,ದೊಡ್ಡ ತಪ್ಪಲೆ, ತಗಡುಗಳನ್ನು ಗುರಾಣಿಯಂತೆ ಬಳಸಿಕೊಂಡರು ಎಂದು ವರದಿಯಲ್ಲಿ ಎಎಫ್‌ಪಿ ನ್ಯೂಸ್ ವರದಿ ಮಾಡಿದೆ.

“ನಗರ ಮಧ್ಯ ನಾವು ನುಗ್ಗಲು ಪ್ರಯತ್ನಿಸಿದೆವು ಆದರೆ ಪೋಲಿಸರು ನಮ್ಮನ್ನು ಬಲವಂತವಾಗಿ ತಡೆದರು ಎಂದು ಪ್ರತಿಭಟನಾಕಾರ ತಿಳಿಸಿದ್ದಾರೆ. ನಾವು ಕೇಂದ್ರದ ಮುಂದೆ ಬೇಡುತ್ತಿಲ್ಲ, ಮೊದಲು ನಮ್ಮದೇನಿತ್ತೋ ಅದನ್ನು ನಾವು ಕೇಳುತ್ತಿದ್ದೇವೆ ಅಷ್ಟೆ. ನಮಗೆ ನೀಡಿದ್ದ ಭರವಸೆಯನ್ನು ಭಾರತ ಉಳಿಸಿಕೊಳ್ಳಬೇಕು ಹಾಗೂ ಗೌರವಿಸಬೇಕು. ಭಾರತದಿಂದ ಕಾಶ್ಮೀರಕ್ಕೆ ಸಂಪೂರ್ಣ ಸ್ವಾತಂತ್ರ್ಯ ದೊರೆಯುವವರೆಗೂ ನಾವು ಮುಂದಿಟ್ಟ ಕಾಲನ್ನು ಹಿಂದಿಡುವುದಿಲ್ಲ” ಎಂದು ಮತ್ತೋರ್ವ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

“ಕಾಶ್ಮೀರ ವಿಷಯ ಸಂಪೂರ್ಣ ಆಂತರಿಕ ವಿಚಾರ” ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಿ ಎಂದ ವಿಶ್ವಸಂಸ್ಥೆ

ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನದ ಸಂವಿಧಾನದ ವಿಧಿಯನ್ನು ಕೈಬಿಡುವ ಭಾರತದ ನಿರ್ಧಾರದ ಹಿನ್ನೆಲೆಯಲ್ಲಿ ಅಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಶುಕ್ರವಾರ ಗೌಪ್ಯ ಸಭೆ ನಡೆಸಿತು. ಐದು ಖಾಯಂ ಸದಸ್ಯರು ಮತ್ತು 10 ಖಾಯಂ ಸದಸ್ಯರಿಗೆ ಮಾತ್ರ ಮುಕ್ತವಾಗಿರುವ ಈ ಸಭೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಭಾಗವಹಿಸಿರಲಿಲ್ಲ.

ಇನ್ನು ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಸದಸ್ಯ ರಾಷ್ಟ್ರಗಳ ನಿಲುವು ಭಾರತದ ಪರವಾಗಿದ್ದರೆ, ಅಂತೆಯೇ ಚೀನಾವನ್ನು ಹೊರತು ಪಡಿಸಿ ಮತ್ತೆ ಕೆಲ ಸದಸ್ಯ ರಾಷ್ಟ್ರಗಳು ತಟಸ್ಥವಾಗಿದ್ದವು.

LEAVE A REPLY

Please enter your comment!
Please enter your name here