Saturday August 12 2017

Follow on us:

Contact Us
  412

ಚಿತ್ರನಟ ಉಪೇಂದ್ರ ಸಾರಥ್ಯದಲ್ಲಿ ‘ಪ್ರಜಾಕೀಯ’ ಪಕ್ಷ ಸ್ಥಾಪನೆ!

ಬೆಂಗಳೂರುನಟ–ನಿರ್ದೇಶಕ ಉಪೇಂದ್ರ ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದು, ರಾಜಕೀಯದಿಂದ ದೂರ ಉಳಿದಿರುವ ಎಲ್ಲರೂ ಮುಂದೆ ಬರುವಂತೆ ಕರೆ ನೀಡಿದ್ದಾರೆ. ‘ನಮಗೆ ಜನ ನಾಯಕನೂ ಬೇಡ, ಜನ ಸೇವಕನೂ ಬೇಡ. ಕರ್ನಾಟಕದ ಜನರು ಅಶಕ್ತರಲ್ಲ. ಇಲ್ಲಿಗೆ ಕಾರ್ಮಿಕರು ಬೇಕು, ಕೆಲಸ ಮಾಡುವವರು ಬೇಕು. ಅದರಿಂದಲೇ ಖಾಕಿ ಹಾಕಿ ಕುಳಿತಿದ್ದೇನೆ. ನೀವೂ ಖಾಕಿ ಹಾಕಿ ಬನ್ನಿ’ ಎಂದು ಸಾರ್ವಜನಿಕರನ್ನು ಹೊಸ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ರುಪ್ಪೀಸ್‌ ರೆಸಾರ್ಟ್‌ನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಉಪೇಂದ್ರ ತಮ್ಮ ಮುಂದಿನ ಯೋಜನೆಗಳನ್ನು ತೆರೆದಿಟ್ಟರು.

‘ಜಾತಿ, ದುಡ್ಡಿನ ಬಲ ಇಲ್ಲದೆ ಗೆಲುವು ಸಾಧ್ಯವಿಲ್ಲ ಎಂದು ರಾಜಕೀಯಕ್ಕೆ ಬರುತ್ತಿಲ್ಲ. ಇದು ನನ್ನನ್ನು ಕಾಡುತ್ತಿತ್ತು. ಈಗ ಪ್ರಯತ್ನಕ್ಕೆ ಮುಂದಾಗಿದ್ದೇನೆ. ಇಲ್ಲಿ ಗೆಲ್ಲುವ ಅಹಂಕಾರ, ಸೋಲುವ ಭಯವಿಲ್ಲ. ‘ಪ್ರಜಾಕೀಯ’ ವೇದಿಕೆಗೆ ಎಲ್ಲರಿಗೂ ಮುಕ್ತ ಅವಕಾಶವಿದೆ’ ಎಂದರು. ಯಾರಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಉಪಾಯಗಳಿವೆ, ಉತ್ತಮ ಯೋಜನೆಗಳಿವೆ ಮುಂದೆ ಬನ್ನಿ. ರಾಜಕೀಯ ನನಗಲ್ಲ ಎಂಬುದನ್ನು ಬಿಟ್ಟು ಬನ್ನಿ. ಸ್ವವಿವರವನ್ನು ‘ಪ್ರಜಾಕಾರಣ’ ಇಮೇಲ್‌ ಐಡಿಗೆ ಕಳುಹಿಸಿ ಅಥವಾ ರುಪ್ಪೀಸ್‌ ರೆಸಾರ್ಟ್‌ ವಿಳಾಸಕ್ಕೆ ಪತ್ರ ಬರೆಯಬಹುದು ಎಂದು ತಿಳಿಸಿದರು. ಹೊಸ ಪಕ್ಷದ ಹೆಸರು, ಅದರ ಚಿಹ್ನೆ ಎಲ್ಲವನ್ನೂ ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಸರಕಾರಿ ಕಾಲೇಜಿಗೆ ದೊರಕದಿರುವ ಅನ್ನಭಾಗ್ಯ ಖಾಸಗಿ ಶಾಲೆಗೆ ದೊರಕಿರುವುದು ಆಶ್ಚರ್ಯ!: ಸಚಿನ್ ರಾಜ್ ಶೆಟ್ಟಿ

ಮುಂದಿನ ಸುದ್ದಿ »

ದ.ಕ ಜಿಲ್ಲೆಯಲ್ಲಿ ನಡೆದ ಕೋಮುಗಲಭೆಗಳಿಗೆ ಬಿಜೆಪಿ ಮತ್ತು ಎಸ್.ಡಿ.ಪಿ.ಐ ಕಾರಣ: ರಮಾನಾಥ ರೈ

ಸಿನೆಮಾ

 • ಸರಳವಾಗಿ ರಿಜಿಸ್ಟರ್ ಮದುವೆಯಾದ ಮುಸ್ತಫಾ-ಪ್ರಿಯಾಮಣಿ

  August 23, 2017

  ಬೆಂಗಳೂರು: ತಮಿಳು, ತೆಲುಗು, ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳ ಸಿನಿಮಾದಲ್ಲಿ ನಟಿಸಿದ್ದ ಬಹುಭಾಷಾ ತಾರೆ ಪ್ರಿಯಾಮಣಿ ಇಂದು ತಮ್ಮ ಹಲವು ಕಾಲದ ಗೆಳೆಯ ಮುಸ್ತಫಾರಾಜಾರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಜಯನಗರ ರಿಜಿಸ್ಟರ್ ಆಫೀಸಿಗೆ ನಟಿ ...

  Read More
 • ಈ ಬಾರಿ ಗಣೇಶೋತ್ಸವ ಆಚರಿಸದ ಸಲ್ಮಾನ್ ಖಾನ್: ಕಾರಣವೇನು ಗೊತ್ತೇ?

  August 22, 2017

  ನ್ಯೂಸ್ ಕನ್ನಡ-(22.08.17): ಬಾಲಿವುಡ್ ನಟ ಸಲ್ಮಾನ್ ಖಾನ್ ಗಣಪತಿ ಭಕ್ತನಾಗಿದ್ದು, ಪ್ರತೀವರ್ಷವೂ ತಮ್ಮ ಮನೆಯಲ್ಲಿ ಗಣೇಶೋತ್ಸವವನ್ನು ಆಚರಿಸುತ್ತಾರೆ. ಆದರೆ ಈ ಬಾರಿ ಸತತ 15ವರ್ಷಗಳಿಂದ ತಮ್ಮ ಮನೆಯಲ್ಲಿ ನಡೆಸುತ್ತಾ ಬಂದಿದ್ದ ವೈಭವದ ಗಣೇಶೋತ್ಸವವನ್ನು ಕೈಬಿಟ್ಟು ಸಲ್ಮಾನ್ ಖಾನ್ ...

  Read More
 • ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಗೈದ ತಮಿಳು ನಟ ಆರ್ಯ

  August 21, 2017

  ನ್ಯೂಸ್ ಕನ್ನಡ ವರದಿ-(21.08.17): ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಖ್ಯಾತ ಯುವನಟ ಆರ್ಯ ಮಮ್ಮೂಟಿ ಅಭಿನಯದ ಗಾಡ್ ಫಾದರ್ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಕೇರಳದಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದರು. ಇದೀಗ ಸೂಪರ್ ಹಿಟ್ ಚಿತ್ರವಾದ ...

  Read More
 • ಕನ್ನಡ ಸಿನಿಮಾದಲ್ಲಿ ಬಣ್ಣ ಹಚ್ಚಲಿರುವ ಕ್ರಿಕೆಟಿಗ ಶ್ರೀಶಾಂತ್!

  August 16, 2017

  ಸ್ಪಾಟ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್‌ ಆರೋಪಗಳಿಂದ ಕಂಗಾಲಾಗಿದ್ದ ಕೇರಳ ಮೂಲದ ವೇಗಿ, ರಾಜಸ್ಥಾನ್ ರಾಯಲ್ಸ್‌ನ ಮಾಜಿ ಆಟಗಾರ ಶ್ರೀಶಾಂತ್ ಇತ್ತೀಚೆಗಷ್ಟೆ ನಿರಾಳರಾಗಿದ್ದಾರೆ. ಅವರ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಜೀವ ನಿಷೇಧ ಹೇರಿತ್ತು. ಇತ್ತೀಚೆಗಷ್ಟೇ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×