Saturday March 26 2016

Follow on us:

Contact Us
tungabhadre
  656

ದಿನದಿಂದ ದಿನಕ್ಕೆ ಬರಿದಾಗುತ್ತಿದೆ  ‘ತುಂಗಭದ್ರೆ’ಯ ಒಡಲು

– ಗಣೇಶ ಇನಾಂದಾರ

ನ್ಯೂಸ್ ಕನ್ನಡ ವಿಶೇಷ ವರದಿ ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಜಲಾಶಯದ ನೀರು  ದಿನದಿಂದ ದಿನಕ್ಕೆ ಬರಿದಾಗುತ್ತಿದ್ದು, ಇದೀಗ ರೈತರಲ್ಲಿ ಮತ್ತು ಸಾರ್ವಜನಿಕರಲ್ಲಿ ನೀರಿನ ಬರವನ್ನು ಎದುರಿಸಬೇಕಾಗುತ್ತದೆಯೇ ಎಂಬ  ಆತಂಕವನ್ನು ಸೃಷ್ಟಿ ಮಾಡಿದೆ.

ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಜೀವ ನದಿಯಾಗಿರುವ ತುಂಬಭದ್ರೆಯಲ್ಲಿ 134 ಟಿ.ಎಂ.ಸಿ. ಅಡಿ ಸಾಮರ್ಥ್ಯದ ಈ ಅಣೆಕಟ್ಟೆಯಲ್ಲಿ ಈಗ  6.545 ಟಿ.ಎಂ.ಸಿ. ಅಡಿ ಮಾತ್ರ ನೀರು ಇದ್ದು. ಕಳೆದ ಹತ್ತು ವರ್ಷಗಳಲ್ಲಿ ಸರಾಸರಿ ನೀರಿನ ಪ್ರಮಾಣ 10 ಟಿ.ಎಂ.ಸಿ. ಅಡಿಗಿಂತ ಯಾವತ್ತೂ ಕಡಿಮೆಯಾಗಿರಲಿಲ್ಲ.  2015ರ ಮಾರ್ಚ್ 25ರಂದು ಅಣೆಕಟ್ಟೆಯಲ್ಲಿ 10.970 ಟಿ.ಎಂ.ಸಿ ಅಡಿ ನೀರಿತ್ತು. ನೀರಿನ ಸಂಗ್ರಹ ಕಡಿಮೆ ಇರುವುದರಿಂದ ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಯ ಹಲವು ಭಾಗಗಳಲ್ಲಿ ಈಗಾಗಲೇ ಹಾಹಾಕಾರ ಉಂಟಾಗಿದೆ.

ಕೊಪ್ಪಳಕ್ಕೆ ಈ ಜಲಾಶಯದಿಂದಲೇ ನೇರ ಪೈಪ್ ಲೈನ್ ವ್ಯವಸ್ಥೆ ಇರುವುದರಿಂದ ಆ ಭಾಗದಲ್ಲಿ ಸಮಸ್ಯೆ ಇಲ್ಲ. ಆದರೆ, ಅಲ್ಲೀಪುರದಲ್ಲಿರುವ ಎತ್ತರದ ಕಾಲುವೆ ಹಾಗೂ ಮೋಕಾದಲ್ಲಿರುವ ಕೆಳಮಟ್ಟದ ಕಾಲುವೆಯಿಂದ  ಹರಿಬಿಡುವ ನೀರನ್ನೇ ಅವಲಂಬಿಸಿರುವ ಬಳ್ಳಾರಿ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಸಮಸ್ಯೆ ತೀವ್ರವಾಗಿದೆ. ಕಾಲುವೆಗೆ ನೀರು ಹರಿಸಲು ಸಾಧ್ಯವಾಗದ ಕಾರಣ ಬಳ್ಳಾರಿಗೆ 10ರಿಂದ 12 ದಿನಗಳಿಗೆ ಒಮ್ಮೆ ಪೂರೈಕೆ ಮಾಡಲಾಗುತ್ತಿದೆ.

“ಹತ್ತು ದಿನಕ್ಕೊಮ್ಮೆ ನೀರು ಬಿಟ್ಟರೆ ಸಾರ್ವಜನಿಕರು ಹೇಗೆ ಜೀವನ ನಡೆಸಬೇಕು. ಪ್ರತಿ ವರ್ಷವು ಇದೆ ಸಮಸ್ಯೆ. ಜನ ಪ್ರತಿನಿಧಿಗಳು ಒಂದು ಶಾಶ್ವತ ಪರಿಹಾರ ಹುಡುಕಬೇಕು”  ಎಂದು ಕೇಳುತ್ತಾರೆ ಬಳ್ಳಾರಿ ಸೋಂತಲಿಂಗಣ್ಲ ಕಾಲನಿ ನಿವಾಸಿ ಅನುರಾಧಾ ವಿ.ಆರ್.

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ, ತೋರಣಗಲ್ಲು, ಕಂಪ್ಲಿ ಹಾಗೂ ಸಂಡೂರಿನ ಕೆಲವು ಭಾಗಗಳಲ್ಲೂ ಇದೇ ಸ್ಥಿತಿ ಇದೆ.  ಜಲಾಶಯಕ್ಕೆ ಹೊಂದಿಕೊಂಡಂತೆಯೇ ಇರುವುದರಿಂದ ಹೊಸಪೇಟೆ ನಗರದಲ್ಲಿ ಅಂತಹ ಸಮಸ್ಯೆ ಇಲ್ಲ. ಇನ್ನು ರಾಯಚೂರು, ಆಂಧ್ರಪ್ರದೇಶದ ಕಡಪಾ, ಅನಂತಪುರ ಹಾಗೂ ಕರ್ನೂಲ್ ಜಿಲ್ಲೆಗಳಿಗೆ ಇಲ್ಲಿಂದ ನೀರು ಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ರಾಯಚೂರಿನ ಅದೋನಿಗೆ ಕುಡಿಯುವುದಕ್ಕಾದರೂ ನೀರು ಬಿಡಬೇಕೆಂದು ಆ ಭಾಗದವರು ಬೇಡಿಕೆ ಸಲ್ಲಿಸಿದ್ದಾರೆ. ಆದರೆ ಜಲಾಶಯ ಆಡಳಿತ ಮಂಡಳಿ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ.

ಇನ್ನು ಮೂರು ತಿಂಗಳವರೆಗೆ ಕುಡಿಯುವುದಕ್ಕೆ ಮಾತ್ರ ಪೂರೈಸುವಷ್ಟು ನೀರಿನ ಸಂಗ್ರಹವಿದೆ. ಮಳೆಯಾಗದಿದ್ದರೆ ಸಮಸ್ಯೆ ಇನ್ನಷ್ಟು ಉಲ್ಬಣಿಸಲಿದೆ. ಬಳ್ಳಾರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಜಲಾಶಯದಿಂದ ನೇರ ಪೈಪ್ಲೈನ್ ವ್ಯವಸ್ಥೆ ಇಲ್ಲ. ಹಾಗಾಗಿ ಪ್ರತೀ ಬೇಸಿಗೆಗೂ ಇದೇ ಸಮಸ್ಯೆ. ಈಗಲಾದರೂ ನೇರವಾಗಿ ಪೈಪ್ಲೈನ್ ಮಾಡಿಸುವತ್ತ ಗಮನಹರಿಸಬೇಕು’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಜಲಾಶಯ ಆಡಳಿತ ಮಂಡಳಿ ಎಂಜಿನಿಯರ್ ಒಬ್ಬರು.

ರಾಯ-ಬಸವ ಕಾಲುವೆಗೆ (ಬಲದಂಡೆ) ನಿತ್ಯ 140 ಕ್ಯೂಸೆಕ್ ಹಾಗೂ ಎಡದಂಡೆ ಕಾಲುವೆ ಮೂಲಕ ಕೊಪ್ಪಳದ ಅಚ್ಚುಕಟ್ಟು ಪ್ರದೇಶಕ್ಕೆ ನಿತ್ಯ 160 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.

nkgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮೈಸೂರಿನಲ್ಲಿ ಯುವಕನ ಬರ್ಬರ ಕೊಲೆ

ಮುಂದಿನ ಸುದ್ದಿ »

ಮಗಳನ್ನೇ ಹತ್ಯೆ ಮಾಡಿದ ತಂದೆ

ಸಿನೆಮಾ

 • marali

  “ಮರಳಿ ಮನೆಗೆ” ಧ್ವನಿಸುರುಳಿ ಬಿಡುಗಡೆ ಸಂಭ್ರಮ

  February 24, 2017

  ನ್ಯೂಸ್ ಕನ್ನಡ(24-2-2017): ಖ್ಯಾತ ಬರಹಗಾರ, ಚಿಂತಕ, ರಂಗಕರ್ಮಿ ಯೋಗೇಶ್ ಮಾಸ್ಟರ್ ನಿರ್ದೇಶನದ ಚೊಚ್ಚಲ ಚಲನಚಿತ್ರ “ಮರಳಿ ಮನೆಗೆ”ಯ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಾತನಾಡಿದ ಯೋಗೇಶ್ ಮಾಸ್ಟರ್ ನಾದಬ್ರಹ್ಮ ಹಂಸಲೇಖ ಅವರು “ದೇಸಿ ಸಂಗೀತದ ...

  Read More
 • bhavana

  ನಟಿ ಭಾವನಾರನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದವನ ಬಂಧನ

  February 18, 2017

  ನ್ಯೂಸ್ ಕನ್ನಡ(18-2-2017): ಚಿತ್ರನಟಿ ಭಾವನಾ ಅವರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಎರ್ನಾಕುಳಂನಲ್ಲಿ ಭಾವನಾ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾವನಾ ಅವರ ಕಾರು ಚಾಲಕನಾಗಿದ್ದ ...

  Read More
 • Marali Manege

  ಸೆನ್ಸಾರ್ ಮಂಡಳಿಯವರನ್ನೂ ಕಣ್ಣೀರು ಹಾಕಿಸಿದ ಚಿತ್ರ ಬಿಡುಗಡೆಗೆ ಸಿದ್ಧ

  February 16, 2017

  ಯೋಗೇಶ್ ಮಾಸ್ಟರ್ ನಿರ್ದೇಶನದ ಚಿತ್ರ ಸಂಘಪರಿವಾರ-ಪ್ರಗತಿಪರರ ಅಭಿಪ್ರಾಯವನ್ನೂ ಬದಲಿಸಬಹುದಂತೆ ನ್ಯೂಸ್ ಕನ್ನಡ ವರದಿ(16.02.2017)-ಮಂಗಳೂರು: ಯೋಗೇಶ್ ಮಾಸ್ಟರ್ ಅವರು ನಿರ್ದೇಶಿಸಿರುವ ‘ಮರಳಿ ಮನೆಗೆ’ ಕನ್ನಡ ಚಿತ್ರವು ಇದೀಗ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದು, ನಾಯಕರ ವೈಭವೀಕರಣದ ಚಿತ್ರಗಳನ್ನೇ ನೋಡಿ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×