Friday January 12 2018

Follow on us:

Contact Us
    1252

ಕನ್ನಡ ನಟಿ ರಾಗಿಣಿಯನ್ನು ಬೆಡ್ ರೂಮ್ ಗೆ ಕರೆದ ರಾಜಕಾರಣಿ ನಾಗರಾಜ್!!

ಮೇಲಿನ ಟೈಟಲ್ ನೋಡಿ ಒಂದು ಕ್ಷಣ ಶಾಕ್ ಆದ್ರಾ.? ನಟಿ ರಾಗಿಣಿ ಅವರನ್ನ ಪೊಲಿಟಿಷಿಯನ್ ಒಬ್ಬರು ಬೆಡ್ ರೂಂಗೆ ಕರೆದಿರುವುದು ನಿಜ. ಆದ್ರೆ, ಬೆಡ್ ರೂಂಗೆ ಕರೆದ ಆ ಪೊಲಿಟಿಶಿಯನ್ ಯಾರು? ಯಾಕೆ ಆ ರೀತಿ ಕರೆದ? ಏನಿದು ಘಟನೆ ಅಂತ ಕನ್ಫ್ಯೂಸ್ ಆಗ್ಬೇಡಿ ಮುಂದೆ ಓದಿ….

ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ ‘ಭರ್ಜರಿ ಕಾಮಿಡಿ’ ಶೋನಲ್ಲಿ ನಟಿ ರಾಗಿಣಿ ದ್ವಿವೇದಿ ತೀರ್ಪುಗಾರರಾಗಿದ್ದಾರೆ. ನಿರ್ದೇಶಕ ಗುರುಪ್ರಸಾದ್ ಮತ್ತು ದೊಡ್ಡಣ್ಣ ಅವರ ಜೊತೆ ರಾಗಿಣಿ ಕೂಡ ವೇದಿಕೆ ಹಂಚಿಕೊಂಡಿದ್ದಾರೆ. ಈ ವಾರದ ಎಪಿಸೋಡ್ ನಲ್ಲಿ ರಾಗಿಣಿ ಅವರಿಗೊಬ್ಬ ಅಭಿಮಾನಿ ಫೋನ್ ಮಾಡಿ ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ವೇಳೆ ತುಪ್ಪದ ಹುಡುಗಿ ಜೊತೆ ಮಾತನಾಡಿದ ಅಭಿಮಾನಿ, ಬೆಳಗಾವಿ ಕಡೆ ಬರುವಂತೆ ಕೋರಿಕೆ ಇಟ್ಟರು. ಅದಕ್ಕೆ ಪ್ರತಿಕ್ರಿಯಿಸಿದ ರಾಗಿಣಿ ನಾನು ಆ ಕಡೆ ಯಾವಾಗಲೂ ಬರುತ್ತೇನೆ, ನೀವು ಭೇಟಿಯಾಗಿಲ್ಲ ಅಷ್ಟೇ ಅಂದರು.

ಮಾತು ಮುಂದುವರೆಸಿದ ಅಭಿಮಾನಿ ‘‘ಈ ಬಾರಿ ನಮ್ಮೂರಿಗೆ ಬಂದಾಗ ನಮ್ಮ ಮನೆಗೆ ಬನ್ನಿ, ನಮ್ಮದು ಸಿಂಗಲ್ ಬೆಡ್ ರೂಂ, ನಾನು ಮತ್ತು ನೀವು ಉಳಿದುಕೊಳ್ಳಬಹುದು. ನನ್ನ ಹೆಂಡತಿ ಇರ್ತಾಳೆ. ಆದ್ರೂ, ಅವಳು ಅಡ್ಜಸ್ಟ್ ಮಾಡಿಕೊಳ್ತಾರೆ” ಎಂದು ದ್ವಂದ್ವಾರ್ಥದಲ್ಲಿ ಮಾತನಾಡಿದರು. ಇದು ಸ್ವತಃ ರಾಗಿಣಿ ಅವರಿಗೆ ಮುಜುಗರ ಜೊತೆ ಆಶ್ಚರ್ಯ ಉಂಟು ಮಾಡಿತು.

ಅಂದ್ಹಾಗೆ, ಆ ಕಾಲ್ ಮಾಡಿದ್ದು ಬೇರೆ ಯಾರೂ ಅಲ್ಲ. ಹಂಬಲ್ ಪೊಲಿಟಿಷಿಯನ್ ನಾಗರಾಜ್.! ಡ್ಯಾನಿಶ್ ಸೇಠ್ ಅಭಿನಯದ ‘ಹಂಬಲ್ ಪೊಲಿಟಿಷಿಯನ್ ನೊಗರಾಜ್’ ಇಂದು (ಜನವರಿ 12) ರಾಜ್ಯಾದ್ಯಂತ ತೆರೆಕಾಣುತ್ತಿದೆ. ಚಿತ್ರದ ಬಗ್ಗೆ ವಿಭಿನ್ನವಾಗಿ ಪ್ರಚಾರ ಮಾಡುತ್ತಿರುವ ಡ್ಯಾನಿಶ್ ಸೇಠ್, ‘ಭರ್ಜರಿ ಕಾಮಿಡಿ’ ಕಾರ್ಯಕ್ರಮಕ್ಕೆ ಪ್ರಾಂಕ್ ಕಾಲ್ ಮಾಡಿ ಈ ರೀತಿ ಮಾತನಾಡಿದ್ದಾರೆ. ಇನ್ನು ಇದು ಕೇವಲ ಕಾಮಿಡಿಗಾಗಿ ಅಷ್ಟೇ. ಈ ಸನ್ನಿವೇಶ ಹೇಗಿತ್ತು? ಡ್ಯಾನಿಶ್ ಕಾಲ್ ಮಾಡಿ ಮಾತನಾಡಿದ ದೃಶ್ಯ ಈ ವಾರ ‘ಭರ್ಜರಿ ಕಾಮಿಡಿ’ ಎಪಿಸೋಡ್ ನಲ್ಲಿ ಪ್ರಸಾರವಾಗಲಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಮಿಸ್ಸ್ ಮಾಡ್ದೆ ನೋಡಿ.. ನೀವು ಕೂಡ ಹೊಟ್ಟೆ ಉಣ್ಣಾಗುವಷ್ಟು ನಕ್ಕು ನಲಿಯಬಹುದು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಬಿಜೆಪಿಯವರನ್ನು ಉಗ್ರಗಾಮಿಗಳೆಂದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ವಿರುದ್ಧ ದೂರು!

ಮುಂದಿನ ಸುದ್ದಿ »

ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಹೊಸ ಯಮಹಾ FZS-FI ರಿಯರ್ ಡಿಸ್ಕ್ ಬ್ರೇಕ್‌ ಮಾರುಕಟ್ಟೆಗೆ!

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×