Monday January 9 2017

Follow on us:

Contact Us
10
  201

ಮನೆಗೆ ಬೆಂಕಿ ತಗುಲಿ ಅಪಾರ ಹಾನಿ

ನ್ಯೂಸ್ ಕನ್ನಡ ವರದಿ (9-1-17): ಮುಂಡಗೋಡ : ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿಯಾದ ಘಟನೆ ಮುಂಡಗೋಡ ಪಟ್ಟಣದ ನೆಹರು ನಗರ(ಪಿ.ಎಲ್‍.ಡಿಬ್ಯಾಂಕ್ ಹಿಂದೆ)ದಲ್ಲಿ ಇಂದು ಬೆಳಗ್ಗೆ ನಡೆದಿದೆ

ಸುಂದರಾಬಾಯಿ ಶೇಟ್ ಎಂಬುವವರ ಮನೆಯಲ್ಲಿ ಬಾಡಿಗೆ ಇರುವ ಟ್ಯಾಕ್ಸಿ ಸ್ಟ್ಯಾಂಡ್ ಏಜಂಟ್, ಅಶೋಕ ಮೈಸೂರ ಎಂಬುವವರ ಮನೆಯೆ ಬೆಂಕಿಗೆ ಆಹುತಿಯಾಗಿದೆ.

ಇಂದು ಬೆಳಗ್ಗೆ ನೀರು ಕಾಯಿಸಲು ಒಲೆ ಹಚ್ಚಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದ್ದು, ಬೆಂಕಿ ಪ್ರಖರತೆಯಿಂದ ಮನೆಯಲ್ಲಿಯ ಎಲ್ಲಾ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿದೆ. ಮನೆಗೆ ಬೆಂಕಿ ತಗುಲಿದಾಗ ಮನೆಯಲ್ಲಿದ್ದ ವೀಣಾ ಮೈಸೂರ ಕೈ ಸುಟ್ಟಿದೆ ಎಂದು ಹೇಳಲಾಗಿದೆ.

ಮನೆಯಲ್ಲಿಯೇ ಸೀರೆ ವ್ಯಾಪಾರ ಮಾಡುತ್ತಿದ್ದ ವೀಣಾ ಮೈಸೂರ, ವ್ಯಾಪಾರಕ್ಕೆ ತಂದಿಟ್ಟ ಸೀರೆಗಳು ಬೆಂಕಿಗೆ ಆಹುತಿಯಾಗಿ ಅಪಾರ ಹಾನಿಯಾಗಿದೆ ಎಂದು ವರದಿಯಾಗಿದೆ. ಮುಂಡಗೋಡ ಅಗ್ನಿಶಾಮದ ದಳ ಆಗಮಿಸಿ ಬೆಂಕಿ ನಂದಿಸಿ ಪಕ್ಕದ ಮನೆಗಳಿಗೆ ಬೆಂಕಿ ತಗಲುವುದನ್ನು ತಪ್ಪಿಸಿದ್ದಾರೆ.

ಘಟನಾ ಸ್ಥಳಕ್ಕೆ ಪ.ಪಂ ಅಧ್ಯಕ್ಷ ರಫೀಕ ಇನಾಮದಾರ, ಪ.ಪಂ ಸದಸ್ಯ ಸಂಜು ಪಿಶೆ ಮುಂತಾದವರು ಭೇಟಿನೀಡಿದರು.

nkrmbhap

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮಹಿಳಾ ಕಾಂಗ್ರೆಸ್ ವತಿಯಿಂದ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ

ಮುಂದಿನ ಸುದ್ದಿ »

ಮಹಿಳಾ ಕಾಂಗ್ರೆಸ್‍ ನಿಂದ ತಮಟೆ ಪ್ರತಿಭಟನೆ: ಕೇಂದ್ರ ಸರಕಾರದ ವಿರುದ್ಧ ಬೀದಿಗಳಿದ ಮಹಿಳಾ ಬಣ

ಸಿನೆಮಾ

 • kattappa

  ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಕರ್ನಾಟಕದಲ್ಲಿ!

  March 18, 2017

  ನ್ಯೂಸ್ ಕನ್ನಡ ವರದಿ(18.03.2017)-ಬೆಂಗಳೂರು: ಬಾಹುಬಲಿ-2 ಚಿತ್ರಕ್ಕೆ ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವನ್ನು ನಿಷೇಧ ಮಾಡುವಂತೆ ಭಾರೀ ಒತ್ತಾಯಗಳು ಕೇಳಿ ಬಂದಿದೆ. ತಮಿಳು ನಟ ಸತ್ಯರಾಜ್ ಕಾವೇರಿ ಹೋರಾಟದ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಕನ್ನಡಿಗರ ...

  Read More
 • eega

  ಕಿಚ್ಚ ಸುದೀಪ್ ಗೆ ಆಂಧ್ರ ಸರಕಾರದ ನಂದಿ ಪ್ರಶಸ್ತಿ

  March 1, 2017

  ನ್ಯೂಸ್ ಕನ್ನಡ(1-3-2017): 2012-13ನೆ ಸಾಲಿನ “ನಂದಿ ಪ್ರಶಸ್ತಿ”ಯನ್ನು ಆಂಧ್ರಪ್ರದೇಶ ಸರಕಾರ ಘೋಷಿಸಿದ್ದು, “ಅಭಿನಯ ಚಕ್ರವರ್ತಿ” ಕಿಚ್ಚ ಸುದೀಪ್ ಅತ್ಯುತ್ತಮ ಖಳನಟನಾಗಿ ಆಯ್ಕೆಯಾಗಿದ್ದಾರೆ. 2012ರಲ್ಲಿ ಬಿಡುಗಡೆಯಾಗಿದ್ದ, ಎಸ್.ಎಸ್. ರಾಜಮೌಳಿ ನಿರ್ದೇಶನದ “ಈಗ” ಚಿತ್ರದ ನಟನೆಗಾಗಿ ಸುದೀಪ್ ಅವರಿಗೆ “ನಂದಿ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×