Wednesday January 11 2017

Follow on us:

Contact Us
Can u please hug me1
    7411

ಶಾಲಾ ಬಾಲಕಿಯರಿಗೆ “ಕೆನ್ ಯು ಪ್ಲೀಸ್ ಹಗ್ ಮಿ” ಎಂದು ಕೇಳಿ ಪೊಲೀಸರ ಅತಿಥಿಯಾದ ಯುವಕ

ನ್ಯೂಸ್ ಕನ್ನಡ ವರದಿ(11.01.2017)-ಬೆಂಗಳೂರು: ಬಾಲಕಿಯರೊಂದಿಗೆ “ಕೆನ್ ಯು ಪ್ಲೀಸ್ ಹಗ್ ಮಿ” ಎಂದು ಕೇಳಿ ಅಸಭ್ಯವಾಗಿ ವರ್ತಿಸಿದ ಯುವಕನೋರ್ವನನ್ನು ವೈಯ್ಯಾಲಕಾವಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮಣಿಕಂಠ ಎಂದು ಗುರುತಿಸಲಾಗಿದೆ. ಈತ ನಿನ್ನೆ ನಾಲ್ಕು ಗಂಟೆಯ ಸುಮಾರಿಗೆ ಶಾಲಾ ಬಾಲಕಿಯರನ್ನು ಹಿಂಬಾಳಿಸಿ ತನ್ನನ್ನು ದಯವಿಟ್ಟು ಅಪ್ಪಿಕೊಳ್ಳುತ್ತೀರಾ? ಎಂದು ಕೇಳಿದ್ದಲ್ಲದೇ ಬಾಲಕಿಯರ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದ. ಈ ಸಂದರ್ಭ ಸ್ಥಳದಲ್ಲಿದ್ದ ಸಾರ್ವಜನಿಕರು ಈತನಿಗೆ ಧರ್ಮದೇಟು ಬಿಗಿದಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ವಿಚಾರವನ್ನು ತಿಳಿದ ಮಣಿಕಂಠ ತಲೆಮರೆಸಿಕೊಳ್ಳಲು ಪ್ರಯತ್ನಿಸಿದ್ದ. ಆದರೆ ಪೊಲೀಸರು ಈತನನ್ನು ಮುನೇಶ್ವರ ಬ್ಲಾಕ್ ಬಳಿಯಲ್ಲಿ ಬಂಧಿಸಿದ್ದಾರೆ.

ನಿನ್ನೆ 7 ಗಂಟೆಯ ಸುಮಾರಿಗೆ ಓರ್ವ ಬಾಲಕಿಯ ಪೋಷಕರು ಈತ ವಿರುದ್ಧ ವೈಯ್ಯಾಲಕಾವಲಿ ಪೊಲೀಸರಿಗೆ ದೂರು ನೀಡಿದ್ದರು. ದೂರು ನೀಡಿ ಮೂರು ಗಂಟೆ ಅವಧಿಯಲ್ಲಿ ಇನ್ ಸ್ಪೆಕ್ಟರ್ ಶ್ರೀಧರ್ ಪೂಜಾರಿ ನೇತೃತ್ವದ ತಂಡ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರ ವಿಚಾರಣೆಯ ವೇಳೆಯಲ್ಲಿ ಮಣಿಕಂಠ, ತಾನು ಕಿಸ್ ಮಿ ಅಂದಿಲ್ಲ, ಹಗ್ ಮಿ ಎಂದು ಮಾತ್ರ ಹೇಳಿದ್ದೇನೆಂದು ತನ್ನನ್ನು ಸಮರ್ಥಿಸಿಕೊಂಡಿದ್ದಾನೆ. ಆದರೆ, ಈ ಘಟನೆಗೂ ಮೊದಲು ಯುವತಿಯೋರ್ವಳ ಜೊತೆಗೂ ಇದೇ ರೀತಿಯ ವರ್ತನೆಯನ್ನು ಮಾಡಿದ್ದು, ಈತನ ವಿರುದ್ಧ ನೊಂದ ಯುವತಿಯೂ ದೂರು ನೀಡಿದ್ದಳು.

ಇದೀಗ ಆರೋಪಿ ಮಣಿಕಂಠನ ವಿರುದ್ಧ ಬಾಲಕಿಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪೋಕ್ಸೊ ಕಾಯ್ದೆಯನ್ನು ದಾಖಲಿಸಲಾಗಿದೆ. ಯುವತಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 354a ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ ಚಂದ್ರಗುಪ್ತ ಹೇಳಿಕೆ ನೀಡಿದ್ದಾರೆ.

ವಿಡಿಯೋ ವೀಕ್ಷಿಸಿ…

nkgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮತ್ತೆ ದುಷ್ಕರ್ಮಿಗಳ ಅಟ್ಟಹಾಸ; ಯುವಕನ ಬರ್ಬರ ಹತ್ಯೆ

ಮುಂದಿನ ಸುದ್ದಿ »

ಸರಕು, ಸೇವಾ ತೆರಿಗೆ ಮಸೂದೆಯನ್ನು ಸೆ.16ರೊಳಗಾಗಿ ಜಾರಿಗೆ ತರಲಾಗುವುದು-ಅರುಣ್ ಜೇಟ್ಲಿ

ಸಿನೆಮಾ

  • bhavana

    ನಟಿ ಭಾವನಾರನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದವನ ಬಂಧನ

    February 18, 2017

    ನ್ಯೂಸ್ ಕನ್ನಡ(18-2-2017): ಚಿತ್ರನಟಿ ಭಾವನಾ ಅವರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಎರ್ನಾಕುಳಂನಲ್ಲಿ ಭಾವನಾ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾವನಾ ಅವರ ಕಾರು ಚಾಲಕನಾಗಿದ್ದ ...

    Read More
  • Marali Manege

    ಸೆನ್ಸಾರ್ ಮಂಡಳಿಯವರನ್ನೂ ಕಣ್ಣೀರು ಹಾಕಿಸಿದ ಚಿತ್ರ ಬಿಡುಗಡೆಗೆ ಸಿದ್ಧ

    February 16, 2017

    ಯೋಗೇಶ್ ಮಾಸ್ಟರ್ ನಿರ್ದೇಶನದ ಚಿತ್ರ ಸಂಘಪರಿವಾರ-ಪ್ರಗತಿಪರರ ಅಭಿಪ್ರಾಯವನ್ನೂ ಬದಲಿಸಬಹುದಂತೆ ನ್ಯೂಸ್ ಕನ್ನಡ ವರದಿ(16.02.2017)-ಮಂಗಳೂರು: ಯೋಗೇಶ್ ಮಾಸ್ಟರ್ ಅವರು ನಿರ್ದೇಶಿಸಿರುವ ‘ಮರಳಿ ಮನೆಗೆ’ ಕನ್ನಡ ಚಿತ್ರವು ಇದೀಗ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದು, ನಾಯಕರ ವೈಭವೀಕರಣದ ಚಿತ್ರಗಳನ್ನೇ ನೋಡಿ ...

    Read More
  • kaabil-hoon-lyrics-title-song-hrithik-roshan-yami-gautam

    ಬಾಕ್ಸ್ ಆಫೀಸ್ ನಲ್ಲಿ “ಕಮಾಲ್” ಮಾಡಿದ “ಕಾಬಿಲ್”

    February 8, 2017

    ನ್ಯೂಸ್ ಕನ್ನಡ(8-2-2017): ಹೃತಿಕ್ ರೋಶನ್-ಯಾಮಿ ಗೌತಮ್ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರ “ಕಾಬಿಲ್” ಬಾಕ್ಸಾಫೀಸ್ ನಲ್ಲಿ ಕಮಾಲ್ ಮಾಡಿದ್ದು, ಸುಮಾರು 80 ಕೋಟಿ ರೂ. ಗಳಿಸಿದೆ. ವಿಮರ್ಶಕರಿಂದ ಉತ್ತಮ ಅಭಿಪ್ರಾಯ ಗಳಿಸಿದ ಕಾಬಿಲ್ ಎರಡನೆ ವಾರಾಂತ್ಯದಲ್ಲಿ 14.55 ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×