ಪೌರತ್ವ ತಿದ್ದುಪಡಿ ಕಾಯ್ದೆ: ಯಾರಿಗೂ ತಿಳಿಯದಂತೆ ರಾಜ್ಯದಲ್ಲಿ ‘ಗೃಹ’ ಬಂಧನ ಕೇಂದ್ರ ಸಜ್ಜಾಗಿಬಿಟ್ಟಿದೆ!

0
264

ನ್ಯೂಸ್ ಕನ್ನಡ ವರದಿ: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ರಾಜ್ಯದಲ್ಲಿ ನಡೆಯಲಿದೆಯೇ, ಇಲ್ಲವೇ ಎಂಬ ಗೊಂದಲ ಮುಂದುವರಿದಿರುವಂತೆಯೇ ನಗರದ ಹೊರವಲಯದ ಸೊಂಡೆಕೊಪ್ಪದಲ್ಲಿ ‘ಗೃಹ’ ಬಂಧನ ಕೇಂದ್ರ ಸಜ್ಜಾಗಿಬಿಟ್ಟಿದೆ.

ಒಂದು ಕಾಲಕ್ಕೆ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಮಕ್ಕಳ ಕಲರವದ ಕೇಂದ್ರವಾಗಿದ್ದ ಇದು ಅಕ್ರಮ ವಲಸಿಗರ ಬಂಧನ ಕೇಂದ್ರವಾಗಿ ಮಾರ್ಪಾಟಾಗುವುದಕ್ಕೆ ಸಜ್ಜಾಗಿದೆ. ಅದರೊಳಗೆ ಯಾರನ್ನು ತಳ್ಳಲಾಗುತ್ತದೆ ಎಂಬುದು ಮಾತ್ರ ನಿಗೂಢವಾಗಿದೆ.

ಬೆಂಗಳೂರು-ಮಾಗಡಿ ರಸ್ತೆಯ ತಾವರೆಕೆರೆಯಿಂದ ಆರು ಕಿ.ಮೀ.ದೂರದಲ್ಲಿ ಮುಖ್ಯ ರಸ್ತೆಯ ಬದಿಯಲ್ಲೇ ಸೀಬೆ, ಅಡಿಕೆ, ರಾಗಿ ತೋಟದ
ನಡುವೆ 10 ಅಡಿ ಎತ್ತರದ ಕಾಂಪೌಂಡ್‌ ಗೋಡೆ, ಅದರ ಮೇಲೆ ರಕ್ಷಣಾ ತಂತಿ ಬೇಲಿ, ಜತೆಗೊಂದು ವೀಕ್ಷಣಾ ಗೋಪುರ, ಅಲ್ಲಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ.

ತಪ್ಪಿಸಿಕೊಂಡು ಹೋಗಲು ಸಾಧ್ಯವೇ ಇಲ್ಲ, ಕೇವಲ 20 ಗುಂಟೆ ಜಾಗದಲ್ಲಿ ಭದ್ರ ಕೋಟೆಯಂತಿರುವ ಇಲ್ಲಿ ಈಗಾಗಲೇ ಪೊಲೀಸ್‌ ಸರ್ಪಗಾವಲು ಆರಂಭವಾಗಿದೆ.

Source: ಪ್ರಜಾವಾಣಿ

LEAVE A REPLY

Please enter your comment!
Please enter your name here