ರಾಜ್ಯದಲ್ಲಿ ಇವತ್ತು ಒಂದೇ ದಿನ 2,313 ಜನರಿಗೆ ಕೊರೊನ: ಜಗತ್ತಿನ ಅತೀ ಹೆಚ್ಚು ಕೊರೊನ ಸಾವಿನ ಪಟ್ಟಿಯಲ್ಲಿ ಭಾರತ!

0
34

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಇಂದು ದಾಖಲೆಯ 2,313 ಜನರಿಗೆ ಹೊಸದಾಗಿ ಕೊರೋನಾ ಸೋಂಕು ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 33,418ಕ್ಕೆ ಏರಿಕೆಯಾಗಿದೆ. ಇವರಲ್ಲಿ 13,836 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಈಗ ಇರುವಂತ ಕೊರೋನಾ ಸೋಂಕಿತರ ಸಂಖ್ಯೆ 19035 ಆಗಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಬೆಂಗಳೂರು ನಗರ – 1447, ದಕ್ಷಿಣ ಕನ್ನಡ – 139, ವಿಜಯಪುರ – 89, ಬಳ್ಳಾರಿ – 66, ಕಲಬುರ್ಗಿ – 58, ಯಾದಗಿರಿ ಮತ್ತು ಮೈಸೂರು – 51, ಧಾರವಾಡ – 50, ಹಾವೇರಿ – 42, ಉಡುಪಿ – 34, ಉತ್ತರ ಕನ್ನಡ ಮತ್ತು ಕೊಡಗು – 33, ಮಂಡ್ಯ – 31, ರಾಯಚೂರು – 25, ದಾವಣಗೆರೆ – 21, ಬೀದರ್ ಮತ್ತು ಗದಗ – 19, ಬೆಳಗಾವಿ – 15, ಚಿಕ್ಕಬಳ್ಳಾಪುರ – 12, ಕೋಲಾರ ಮತ್ತು ಚಾಮರಾಜನಗರ – 09, ಕೊಪ್ಪಳ – 07, ಹಾಸನ, ಶಿವಮೊಗ್ಗ ಮತ್ತು ಬಾಗಲಕೋಟೆ – 06, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಮಗಳೂರು – 01 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದೆ.

ಈ ಮೂಲಕ ರಾಜ್ಯದಲ್ಲಿ ಇಂದು 2313 ಜನರಿಗೆ ಕೊರೋನಾ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 33,418ಕ್ಕೆ ಏರಿಕೆಯಾಗಿದೆ. ಇವರಲ್ಲಿ 13,836 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 19,035 ಆಗಿದೆ. ಇಂದು 57 ಜನರು ಕೊರೋನಾದಿಂದಾಗಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 543ಕ್ಕೆ ಏರಿಕೆಯಾಗಿರುವುದಾಗಿ ತಿಳಿಸಿದೆ.

ಮಾರಕ ಕೊರೊನಾ ವೈರಸ್ ಕರ್ನಾಟಕದ ಜನತೆಯನ್ನು ತಲ್ಲಣಗೊಳಿಸಿದೆ. ಇಂದು ಕೂಡ ದಾಖಲೆ ಸಂಖ್ಯೆಯಲ್ಲಿ ಕೊರೊನಾ ಸೋಂಕು ತಗುಲಿದೆ.

ಇಂದು ರಾಜ್ಯದಲ್ಲಿ 57 ಮಂದಿ ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದು, ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 543 ಕ್ಕೆ ಏರಿಕೆಯಾಗಿದೆ. 472 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ರಾಜ್ಯದಲ್ಲಿ 2313 ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 33418 ಕ್ಕೆ ಏರಿಕೆಯಾಗಿದೆ. ಇನ್ನೂ, ಇಂದು 13636 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಗತ್ತಿನಲ್ಲಿ ಅತಿ ಹೆಚ್ಚು ಕೊವಿಡ್ ಸಾವು ವರದಿಯಾಗಿರುವ ದೇಶಗಳ ಪಟ್ಟಿಯಲ್ಲು ಭಾರತ ನಾಲ್ಕನೇ ಸ್ಥಾನ

ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ಜಗತ್ತಿನ ರಾಷ್ಟ್ರಗಳ ಪೈಕಿ ಮೂರನೇ ಸ್ಥಾನದಲ್ಲಿರುವ ಭಾರತ, ಪ್ರತಿದಿನ ಸಾವಿನ ಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಭಾರತಕ್ಕೂ ಮುಂಚೆ ಅಮೆರಿಕ, ಬ್ರೆಜಿಲ್ ಹಾಗೂ ಮೆಕ್ಸಿಕೋ ದೇಶಗಳಲ್ಲಿ ದೈನಂದಿನ ಸಾವು ಹೆಚ್ಚಿದೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 475 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಪ್ರಕಟಣೆ ಮಾಡಿದೆ.

ಬ್ರೆಜಿಲ್‌ನಲ್ಲಿ ನಿನ್ನೆ ಒಂದೇ ದಿನ 1199 ಮಂದಿ ಸಾವನ್ನಪ್ಪಿದ್ದಾರೆ.ಅಮೆರಿಕದಲ್ಲಿ 960 ಮಂದಿ ಮೃತಪಟ್ಟಿದ್ದಾರೆ. ಮೆಕ್ಸಿಕೋದಲ್ಲಿ 782 ಜನರು ಬಲಿಯಾಗಿದ್ದಾರೆ. ಭಾರತದಲ್ಲಿ 475 ಪ್ರಾಣಬಿಟ್ಟಿದ್ದಾರೆ.

ಇಲ್ಲಿಯವರೆಗೂ ಭಾರತದಲ್ಲಿ 21,604 ಜನರು ಕೊರೊನಾ ಸೋಂಕಿನಿಂದ ಪ್ರಾಣಕಳೆದುಕೊಂಡಿದ್ದಾರೆ. ಅತಿ ಹೆಚ್ಚು ಕೊವಿಡ್ ಸಾವು ಕಂಡಿರುವ ದೇಶಗಳ ಪಟ್ಟಿಯಲ್ಲಿ ಭಾರತ 8ನೇ ಸ್ಥಾನದಲ್ಲಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಕೊವಿಡ್ ಸಾವು ವರದಿಯಾಗಿರುವ ದೇಶಗಳ ಪಟ್ಟಿ

ಅಮೆರಿಕದಲ್ಲಿ ಒಟ್ಟು ಸಾವು 135,822

ಬ್ರೆಜಿಲ್‌ನಲ್ಲಿ ಒಟ್ಟು ಸಾವು 69,254

ಬ್ರಿಟನ್‌ನಲ್ಲಿ ಒಟ್ಟು ಸಾವು 44,602

ಇಟಲಿ ದೇಶದಲ್ಲಿ ಒಟ್ಟು ಸಾವು 34,926

ಮೆಲ್ಸಿಕೋದಲ್ಲಿ ಒಟ್ಟು ಸಾವು 32,796

ಫ್ರಾನ್ಸ್ ದೇಶದಲ್ಲಿ ಒಟ್ಟು ಸಾವು 29,979

ಸ್ಪೇನ್‌ನಲ್ಲಿ ಒಟ್ಟು ಸಾವು 28,401

ಭಾರತದಲ್ಲಿ ಒಟ್ಟು ಸಾವು 21,604.

LEAVE A REPLY

Please enter your comment!
Please enter your name here