ಕಂಗನಾ ರಣಾವತ್ ಗೆ ಸಂಸತ್ತಿನಲ್ಲೇ ತಿರುಗೇಟು ನೀಡಿದ ಜಯಾ ಬಚ್ಚನ್ ಹೇಳಿದ್ದೇನು ಗೊತ್ತೇ?

0
27

ನ್ಯೂಸ್ ಕನ್ನಡ ವರದಿ: ನಟ ಸುಶಾಂತ್ ಸಿಂಗ್ ಅವರ ಅಸಹಜ ಸಾವಿನ ನಂತರ ಸದಾ ಸುದ್ದಿಯಲ್ಲಿರುವ ನಟಿ ಕಂಗನಾ ರಣಾವತ್ ವಿರುದ್ಧ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಗರಂ ಆಗಿದ್ದಾರೆ, ಸಂಸತ್ತಿನಲ್ಲೇ ಕಿಡಿಕಾರಿದ್ದಾರೆ. ಚಿತ್ರೋದ್ಯಮಕ್ಕೆ ಕೆಟ್ಟ ಹೆಸರು ತರುವ ಷಡ್ಯಂತ್ರ ಕುರಿತಂತೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಸಮಾಜವಾದಿ ಪಕ್ಷದ ಸಂಸದೆ ತಮ್ಮ ಅಸಮಾಧಾನ ಮುಂದಿಟ್ಟರು.

“ಚಲನಚಿತ್ರ ಎಂಬುದು ಮನೋರಂಜನೆ ನೀಡುವ ಕ್ಷೇತ್ರ. ಇದೀಗ ಚಿತ್ರೋದ್ಯಮದ ಜನರನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಲಾಗುತ್ತಿದೆ. ಈ ಕ್ಷೇತ್ರದಿಂದ ಹೆಸರು ಗಳಿಸಿದವರು ಅದನ್ನು ಗಟಾರ ಎಂದಿದ್ದಾರೆ. ಇದನ್ನು ನಾನು ಸಂಪೂರ್ಣವಾಗಿ ಒಪ್ಪುವುದಿಲ್ಲ. ಇಂತಹ ಭಾಷೆ ಬಳಸದಂತೆ ಸರಕಾರ ಇಂತಹ ಜನರಿಗೆ ಹೇಳಬೇಕು,” ಎಂದು ಹೇಳುವ ಮೂಲಕ ಪರೋಕ್ಷವಾಗಿ ನಟಿ ಕಂಗನಾ ರಾಣಾವತ್ ಅವರನ್ನು ಟೀಕಿಸಿದ್ದಾರೆ.

ಚಿತ್ರರಂಗವನ್ನು ಗಟಾರ ಎಂದು ಕರೆದಿದ್ದ ಕಂಗನಾ, ಅಲ್ಲಿ ಕೆಲಸ ಮಾಡುವ ಶೇ. 99ರಷ್ಟು ಮಂದಿ ಡ್ರಗ್ಸ್ ಬಳಸಿದ್ದಾರೆ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯೆಯಾಗಿ ತೀಕ್ಷ್ಣವಾಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಜಯಾಬಚ್ಚನ್ ಕೇವಲ ಕೆಲ ಜನರಿದ್ದಾರೆಂಬ ಮಾತ್ರಕ್ಕೆ ಇಡೀ ಚಿತ್ರೋದ್ಯಮವನ್ನು ದೂಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.

LEAVE A REPLY

Please enter your comment!
Please enter your name here