ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ನಾಥೂರಾಮ್ ಗೋಡ್ಸೆ: ಕಮಲಹಾಸನ್

0
207

ನ್ಯೂಸ್ ಕನ್ನಡ ವರದಿ(13.5.19): ತಮಿಳುನಾಡಿನ ಖ್ಯಾತ ನಟ ಕಮಲ್ ಹಾಸನ್ ರಾಜಕೀಯ ಪ್ರವೇಶ ಮಾಡಿದ ಬಳಿಕ ಹಲವಾರು ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ದರು. ಇದೀಗ ಮತ್ತೊಂದು ನಿರ್ಭೀತ ಹೇಳಿಕೆ ನೀಡಿದ್ದು, ಸ್ವತಂತ್ರ ಭಾರತದ ಮೊತ್ತ ಮೊದಲ ಭಯೋತ್ಪಾದಕನೆಂದರೆ ಗಾಂಧೀಜಿಯನ್ನು ಗುಂಡಿಕ್ಕಿ ಕೊಂದ ನಾಥೂರಾಮ್ ಗೋಡ್ಸೆ, ಪ್ರಪ್ರಥಮ ಹಿಂದೂ ಭಯೋತ್ಪಾದಕನೆಂದರೆ ಆತನೇ ಎಂದು ಅವರು ಹೇಳಿಕೆ ನೀಡಿದ್ದಾರೆ.

ಇದೇ ಮೇ 19ರಂದು ಅರವಕುರುಚ್ಚಿ ವಿಧಾನ ಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ತನ್ನ ನೂತನ ಎಂಎನ್‌ಎಂ ಪಕ್ಷದ ಅಭ್ಯರ್ಥಿ ಪರ ನಡೆಸಲಾದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಕಮಲ ಹಾಸನ್‌ ಭಾಷಣ ಮಾತನಾಡುತ್ತಿದ್ದರು. “ಸ್ವತಂತ್ರ ಭಾರತದ ಮೊದಲ ಹಿಂದೂ ಭಯೋತ್ಪಾದಕ ನಾಥೂರಾಮ್‌ ಗೋಡ್ಸೆ ಎಂದು ನಾನಿಲ್ಲಿ ಗಾಂಧಿ ಪ್ರತಿಮೆಯ ಎದುರು ನಿಂತು ಹೇಳುತ್ತಿದ್ದೇನೆ. ಇದೇನೂ ಚುನಾವಣಾ ಗಿಮಿಕ್‌ ಅಲ್ಲ; ಅಥವಾ ಈ ಕ್ಷೇತ್ರದಲ್ಲಿರುವ ಗಣನೀಯ ಸಂಖ್ಯೆಯ ಮುಸ್ಲಿಮ್‌ ಬಾಂಧವರನ್ನು ಖುಷಿ ಪಡಿಸಲೂ ಅಲ್ಲ’ ಎಂದು ಕಮಲ ಹಾಸನ್‌ ಹೇಳಿದರು.

LEAVE A REPLY

Please enter your comment!
Please enter your name here