ಕಮಲಹಾಸನ್ ಹಿಂದೂ ಭಯೋತ್ಪಾದಕ ಹೇಳಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕು: ಬಿಜೆಪಿ ಮುಖಂಡ

0
52

ನ್ಯೂಸ್ ಕನ್ನಡ ವರದಿ: (16.05.19) ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಕಮಲ್ ಹಾಸನ್ “ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ, ನಾಥುರಾಮ್ ಗೋಡ್ಸೆ” ಎಂಬ ಹೇಳಿಕೆಗೆ ಬಾರಿ ಅಸಮಧಾನ ವ್ಯಕ್ತಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟಿಗೆ ಸೂಚಿಸಿದ್ದಾರೆ.

ಚುನಾವಣೆ ಪ್ರಚಾರದ ವೇಳೆ ಕಮಲ್ ಹಾಸನ್ ಹೇಳಿಕೆಗೆ ಬಿಜೆಪಿ ಮುಖಂಡ ಅಶ್ವಿನಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೆಹಲಿಯ ಹೈ ಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ‘ಇದು ನಮ್ಮ ಕಾರ್ಯ ವ್ಯಾಪ್ತಿಗೆ ಬರುವುದಿಲ್ಲ’ ಎಂದು ನ್ಯಾಯಮೂರ್ತಿಗಳಾದ ಜಿ ಎಸ್ ಸಿಸ್ತಾನಿ ಹಾಗೂ ಜ್ಯೋತಿ ಸಿಂಗ್ ಈ ಬಗ್ಗೆ ಕ್ರಮ ಕೈಗೊಳ್ಳಲು ನಿರಾಕರಿಸಿ ಚುನಾವಣಾ ಆಯೋಗಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಚುನಾವಣೆ ಪ್ರಚಾರದ ವೇಳೆ ಕಮಲ್ ಹಾಸನ್ ರವರು ತಮ್ಮ ಪಕ್ಷದ ಅಭ್ಯರ್ಥಿಯ ಪರ ಮತ ಗಳಿಸಲು ಮುಸ್ಲಿಂ ಪ್ರದೇಶದಲ್ಲಿ ಉದ್ದೇಶಪೂರ್ವಕವಾಗಿ ಈ ಮಾತನ್ನು ಹೇಳಿದ್ದಾರೆ ಇದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ವಾದಿಸಿದರು.

ಕಮಲ್ ಹಾಸನ್ ವಿರುದ್ಧ ಬುಧವಾರ ಮದ್ರಾಸ್ ಹೈಕೋರ್ಟಿಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು “ನನ್ನ ಹೇಳಿಕೆ ಕೇವಲ ನಾಥುರಾಮ್ ಗೆ ಸೀಮಿತವಾಗಿತ್ತು ಒಟ್ಟಾರೆ ಎಲ್ಲಾ ಹಿಂದೂಗಳನ್ನು ಉದ್ದೇಶಿಸಿದ್ದಾಗಿರಲಿಲ್ಲ” ಎಂದಿದ್ದಾರೆ.

‘ನಾನು ಚಾರಿತ್ರಿಕ ಸತ್ಯವನ್ನು ನುಡಿದಿದ್ದೇನೆ , ಆದರೆ ಮಾಧ್ಯಮಗಲು ನನ್ನ ಮಾತುಗಳನ್ನು ತಿರುಚಿವೆ.’ ಎಂದು ಕಮಲ್ಹಾಸನ್ ತಾನು ಹೇಳಿದ ಗೋಡ್ಸೆ ವಿರುದ್ಧದ ಮಾತಿಗೆ ಸಮರ್ಥಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here