ನ್ಯೂಸ್ ಕನ್ನಡ ವರದಿ-(21.04.18): ಬೆಂಗಳೂರು: ರಾಜ್ಯದ ಸಮಸ್ಯೆಗಳಿಗೆ ಡಾ|ಯು.ಆರ್.ಅನಂತ ಮೂರ್ತಿ, ಕವಿ ಸಿದ್ದಲಿಂಗಯ್ಯ,ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಶಿವರಾಮ ಕಾರಂತ, ಪ್ರಸನ್ನ ಮೊದಲಾದವರು ಬೇರೆ ಬೇರೆ ವಲಯದಿಂದ ಸ್ಪಂದಿಸುತ್ತಿದ್ದ ಮಾದರಿಯಲ್ಲಿ ಸೇವೆ ಸಲ್ಲಿಸಲು ಜಸ್ಟ್ ಆಸ್ಕಿಂಗ್ ಫೌಂಡೇಷನ್ ರಾಜ್ಯಾದ್ಯಂತ ನೆಟ್ವರ್ಕ್ ಸಿದ್ಧಪಡಿಸುತ್ತಿದೆ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.
ನಮಗೆ ಯಾವುದೇ ರಾಜಕೀಯ ಪಕ್ಷದ ಸಿದ್ಧಾಂತ ಅಗತ್ಯವಿಲ್ಲ. ಉತ್ತಮ ಸರಕಾರ ಬೇಕು. ಪಕ್ಷವೂ ತನ್ನ ಸಿದ್ಧಾಂತವನ್ನು ಜನರ ಮೇಲೆ ಹೇರುವುದನ್ನು ಸಹಿಸುವುದಿಲ್ಲ. ಈ ನಿಟ್ಟಿನಲ್ಲಿ ಜಸ್ಟ್ ಆಸ್ಕಿಂಗ್ ಫೌಂಡೇಷನ್ ಆರಂಭಿಸಿದ್ದು, ಈ ವೇದಿಕೆ ಮೂಲಕ ಪ್ರತಿಯೊಬ್ಬರನ್ನು ಪ್ರಶ್ನಿಸುವ ಹಕ್ಕು ಪ್ರತಿಪಾದಿಸಲಾಗುವುದು ಎಂದು ತಿಳಿಸಿದರು.