JNU ಭೇಟಿ ಹಿನ್ನೆಲೆ, ‘SKILL INDIA’ ಪ್ರಚಾರ ವಿಡಿಯೊದಿಂದ ದೀಪಿಕಾ ಗೇಟ್ ಪಾಸ್

0
44

ನ್ಯೂಸ್ ಕನ್ನಡ ವರದಿ: ನಟಿ ದೀಪಿಕಾ ಪಡುಕೋಣೆ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು)ಕ್ಕೆ ಭೇಟಿ ನೀಡಿದ ಪರಿಣಾಮ ಪ್ರಧಾನಿ ನರೇಂದ್ರ ಮೋದಿ ಅವರ ‘ಸ್ಕಿಲ್ ಇಂಡಿಯಾ’ ಕಾರ್ಯಕ್ರಮ ಪ್ರಚಾರ ವಿಡಿಯೋದಿಂದ ದೀಪಿಕಾ ಮಾತನಾಡಿದ ಭಾಗವನ್ನು ತೆಗೆದು ಹಾಕಲಾಗಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳಿಂದ ದೀಪಿಕಾಗೆ ಗೇಟ್ ಪಾಸ್ ನೀಡಲಾಗಿದೆ.

ಬುಧವಾರ ಕೌಶಲಾಭಿವೃದ್ದಿ ಸಚಿವಾಲಯ ಈ ವಿಡಿಯೋ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ದೀಪಿಕಾ ಪಡುಕೋಣೆ ಅವರೇ ಈ ವಿಡಿಯೋ ಬಿಡುಗಡೆ ಮಾಡಬೇಕಾಗಿತ್ತು. ಆದರೆ, ಜೆಎನ್‌ಯು ಭೇಟಿಯಿಂದಾಗಿ ‘ಸ್ಕಿಲ್ ಇಂಡಿಯಾ’ದ ಕಾರ್ಯಕ್ರಮದ ಪ್ರಚಾರವನ್ನು ದೀಪಿಕಾ ಇಲ್ಲದೆ ನಡೆಸಲಾಗಿದೆ.

LEAVE A REPLY

Please enter your comment!
Please enter your name here