ಬಂಧಿತ ಪೋಲೀಸ್ ದವೀಂದ್ರ ಸಿಂಗ್ ಅವರನ್ನು ಭಯೋತ್ಪಾದಕ ಎಂದು ಪರಿಗಣಿಸಲಾಗುವುದು: ಐಜಿಪಿ ಜಮ್ಮು – ಕಾಶ್ಮೀರ ಪೊಲೀಸ್ ಸ್ಪಷ್ಟನೆ

0
20

ನ್ಯೂಸ್ ಕನ್ನಡ ವರದಿ: ದಕ್ಷಿಣ ಕಾಶ್ಮೀರದ ಕಣಿವೆಯಲ್ಲಿ ನಡೆದ ಪ್ರಮುಖ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಭಾಗವಾಗಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಡೆಪ್ಯುಟಿ ಸೂಪರಿಂಟೆಂಡೆಂಟ್ ಪೊಲೀಸ್ ಸೇರಿ ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಲಷ್ಕರ್-ಎ- ತಯಬಾದ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ.

ಹಿಜ್ಬುಲ್ ಭಯೋತ್ಪಾದಕ ಮತ್ತು ಮಾಜಿ ಪೊಲೀಸ್ ಅಧಿಕಾರಿಯಾದ ನವೀದ್ ಅಹ್ಮದ್ ಷಾ ಅಲಿಯಾಸ್ ನವೀದ್ ಬಾಬು ಮತ್ತು ರಫಿ ಅಹ್ಮದ್ ಎಂಬಾತನೊಂದಿಗೆ ಇದ್ದಾಗ ಡಿಎಸ್‌ಪಿ ದೇವಿಂದರ್ ಸಿಂಗ್ ಅವರನ್ನು ಬಂಧಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ (ಜೆ & ಕೆ) ಪೊಲೀಸರು ದಕ್ಷಿಣ ಕಾಶ್ಮೀರದಲ್ಲಿ ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಲಷ್ಕರ್-ಎ-ತೊಯ್ಬಾ ಉಗ್ರರೊಂದಿಗೆ ಜೆ & ಕೆ ಪೊಲೀಸ್ ಉಪ ಅಧೀಕ್ಷಕರನ್ನು ಬಂಧಿಸಿರುವುದನ್ನು ಭಾನುವಾರ ಖಚಿತಪಡಿಸಿದ್ದಾರೆ. ಹಿರಿಯ ಪೋಲೀಸ್ ಬಂಧನ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಐಜಿಪಿ ಜೆ & ಕೆ ಪೊಲೀಸ್ ವಿಜಯ್ ಕುಮಾರ್, ಬಂಧಿತ ಪೊಲೀಸರನ್ನು ಭಯೋತ್ಪಾದಕ ಎಂದು ಪರಿಗಣಿಸಿ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಮೂವರು ಶನಿವಾರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಜೆ & ಕೆ ಪೊಲೀಸರು ಹಿರಿಯ ಪೊಲೀಸ್ ಅಧಿಕಾರಿ ದವೀಂದ್ರ ಸಿಂಗ್ ಮತ್ತು ಇಬ್ಬರು ಉಗ್ರರಾದ ನವೀದ್ ಬಾಬು ಮತ್ತು ಅಲ್ತಾಫ್ ಅವರೊಂದಿಗೆ ಇಬ್ಬರು ಶಂಕಿತ ಉಗ್ರರು ಮತ್ತು ಓರ್ವ ಪೋಲಿಸ್ ಅನ್ನು ವಶಕ್ಕೆ ಪಡೆದಿದ್ದಾರೆ.

ಉನ್ನತ ಪೋಲೀಸ್ ಅಧಿಕಾರಿಯ ನಿವಾಸದಿಂದ ಐದು ಗ್ರೆನೇಡ್ ಮತ್ತು ಮೂರು ಎಕೆ -47 ರೈಫಲ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಯೊಂದರಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದಾಗ ಜೆ & ಕೆ ಪೋಲೀಸ್ ಬಂಧಿಸಿದ್ದಾರೆಂದು ಧೃಡೀಕರಿಸಿದ್ದಾರೆ ಐಜಿಪಿ ವಿಜಯ್ ಕುಮಾರ್, “ನಿನ್ನೆ ಸೋಫಿಯಾನ್‌ನಲ್ಲಿ ನಡೆದ ಕಾರ್ಯಾಚರಣೆಯ ಸಂದರ್ಭದಲ್ಲಿ, ಒಬ್ಬ ಉಪ ಪೊಲೀಸ್ ವರಿಷ್ಠಾಧಿಕಾರಿಯನ್ನು (ಡಿಎಸ್‌ಪಿ) ಇಬ್ಬರು ವಾಂಟೆಡ್ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರೊಂದಿಗೆ ಬಂಧಿಸಲಾಯಿತು ಎಂದು ಸ್ಪಷ್ಟಪಡಿಸಿದ್ದಾರೆ.”

ವಿಚಾರಣೆ ನಡೆಯುತ್ತಿದ್ದು, ಬಂಧಿತ ಅಧಿಕಾರಿಯನ್ನು ಎಲ್ಲಾ ಭದ್ರತಾ ಸಂಸ್ಥೆಗಳಿಂದ ವಿಚಾರಣೆ ನಡೆಸಲಾಗುವುದು ಮತ್ತು ಇತರ ಬಂಧಿತ ಉಗ್ರರಂತೆ ಪರಿಗಣಿಸಲಾಗುವುದು ಎಂದು ಐಜಿಪಿ ವಿಜಯ್ ಕುಮಾರ್ ಹೇಳಿದರು.

ಡಿಎಸ್‌ಪಿ ಸಿಂಗ್ ಅವರು 1990ರ ದಶಕದಿಂದಲೂ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಭಾಗವಾಗಿದ್ದವರು. ಟ್ರಾಲ್ ನಿವಾಸಿಯಾಗಿರುವ ಸಿಖ್ ಅಧಿಕಾರಿ, ಕಾಶ್ಮೀರ ಕಣಿವೆಯಲ್ಲಿ ಹೋರಾಡುವಲ್ಲಿ ಮುಂಚೂಣಿಯಲ್ಲಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಪಾತ್ರವಹಿಸಿದ್ದಕ್ಕಾಗಿ ಡಿಎಸ್ಪಿ ದವೀಂದ್ರ ಸಿಂಗ್ ಅವರಿಗೆ ರಾಷ್ಟ್ರಪತಿ ಪದಕ ನೀಡಲಾಗಿತ್ತು ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

LEAVE A REPLY

Please enter your comment!
Please enter your name here