ಅನರ್ಹ ಶಾಸಕ ಶಂಕರ್‌ಗೆ ನೊ ಟಿಕೇಟ್: ಬಿಜೆಪಿ ರಾಜಕೀಯ ದಾಳಕ್ಕೆ ಬಲಿಯಾದ್ರ ಶಂಕರ್?

0
390

ನ್ಯೂಸ್ ಕನ್ನಡ ವರದಿ: ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಒಟ್ಟು 17 ಅನರ್ಹ ಶಾಸಕರು ಇಂದು (ಗುರುವಾರ) ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದು, ನಿರೀಕ್ಷೆಯಂತೆ ಗುರುವಾರವೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿಡುಗಡೆ ಮಾಡಿದೆ.ಆದ್ರೆ,15 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ರಾಣೇಬೆನ್ನೂರು ಹಾಗೂ ಶಿವಾಜಿನಗರಕ್ಕೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.

ರಾಣೇಬೆನ್ನೂರು ಕ್ಷೇತ್ರಕ್ಕೆ ಆರ್. ಶಂಕರ್ ಕೈಬಿಟ್ಟು ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ನೀಡುವುದು ಖಚಿತವಾಗಿದ್ದು, ಅಧಿಕೃತ ಪ್ರಕಟಣೆಯೊಂದೇ ಬಾಕಿ ಇದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here