ಯೂತ್ ಒಲಿಂಪಿಕ್ಸ್ ನಲ್ಲಿ ಮೊದಲ ಚಿನ್ನದ ಪದಕ ಗಳಿಸಿದ ಭಾರತ

0
120

ನ್ಯೂಸ್ ಕನ್ನಡ ವರದಿ : ಬ್ಯುನೋಸ್ ಐರಿಸ್(ಅರ್ಜೆಂಟೀನಾ) ದಲ್ಲಿ ವೇಟ್​ಲಿಫ್ಟರ್ ಜೆರೆಮಿ ಲಾಲ್​ರಿನುಂಗ ಯೂಥ್​ ಒಲಂಪಿಕ್ಸ್​ನಲ್ಲಿ ಭಾರತಕ್ಕೆ ಮೊದಲ ಬಂಗಾರದ ಪದಕ ತಂದುಕೊಟ್ಟಿದ್ದಾರೆ.

ಪುರುಷರ 62 ಕೆ.ಜಿ. ವಿಭಾಗದಲ್ಲಿ ಜೆರೆಮಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಟರ್ಕಿಯ ಟಾಪ್ಟಾಸ್ ಕೇನರ್​​ ಬೆಳ್ಳಿಗೆ ಕೊರಳೊಡ್ಡಿದರೆ, ಕೊಲಂಬಿಯಾದ ವಿಲ್ಲಾರ್ ಎಸ್ಟಿವೆನ್ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಇದೇ 26 ರಂದು 16 ನೇ ವರ್ಷಕ್ಕೆ ಕಾಲಿಡಲಿರುವ ಜೆರೆಮಿ ವೇಟ್​ಲಿಫ್ಟಿಂಗ್​ನಲ್ಲಿ ಚಿನ್ನದ ಪದಕದ ಮೂಲಕ ತಮ್ಮ ಸಾಮರ್ಥ್ಯವನ್ನು ನಿರೂಪಿಸಿದ್ದಾರೆ.

LEAVE A REPLY

Please enter your comment!
Please enter your name here