ಶತಕದ ಸಂಭ್ರಮದಲ್ಲಿಯೇ ಅಂಪೈರ್ ಮೇಲೆ ಬಿದ್ದ ಜೇಸನ್ ರಾಯ್!

0
460

ನ್ಯೂಸ್ ಕನ್ನಡ ವರದಿ: (08.06.19): ಸದ್ಯ ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದೆ. ಕ್ರಿಕೆಟ್ ಆಟದ ನಡುವೆಯೇ ಹಲವಾರು ಹಾಸ್ಯ ಘಟನೆಗಳು ಮತ್ತು ಅನಿರೀಕ್ಷಿತ ಘಟನೆಗಳು ನಡೆಯುತ್ತಲೇ ಇರುತ್ತವೆ. ಐಪಿಎಲ್ ಬಂದ ಬಳಿಕವಂತೂ ಪ್ರಮಾಣ ಹೆಚ್ಚಾಗಿದೆ. ಇದೀಗ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಪಂದ್ಯಾಟ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ ಜೇಸನ್ ರಾಯ್ ಕ್ರೀಡಾಂಗಣದಲ್ಲಿ ಅಂಪೈರ್ ಮೇಲೆಯೇ ಬಿದ್ದು ಎಡವಟ್ಟು ಮಾಡಿಕೊಂಡಿದ್ದಾರೆ.

ಶತಕದ ಹೊಸ್ತಿಲಿನಲ್ಲಿದ್ದ ಜೇಸನ್ ರಾಯ್ ಚೆಂಡನ್ನು ಬಾರಿಸಿ ಫೀಲ್ಡರ್ ನತ್ತ ನೋಡುತ್ತಾ ಓಡುತ್ತಿದ್ದರು. ಈ ವೇಳೆ ಮುಂದಿರುವ ಅಂಪೈರ್ ರನ್ನು ಗಮನಿಸಿರಲಿಲ್ಲ. ಹೀಗಾಗಿ ಅಂಪಾಯರ್ ಮೇಲೆಯೇ ಜೇಸನ್ ರಾಯ್ ಬಿದ್ದಿದ್ದು ಪೆವಿಲಿಯನ್ ನಲ್ಲಿರುವವರ ಮುಖದಲ್ಲಿ ನಗೆ ಚಿಮ್ಮಿಸಿತ್ತು.

ವೀಡಿಯೋಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://www.cricketworldcup.com/video/1238892

LEAVE A REPLY

Please enter your comment!
Please enter your name here