ಪ್ರಬಲ ಭೂಕಂಪಗಳಿಗೆ ನಲುಗಿದ ದ್ವೀಪ ರಾಷ್ಟ್ರ ಜಪಾನ್!

0
181
ಸಾಂಧರ್ಭಿಕ ಚಿತ್ರ

ನ್ಯೂಸ್ ಕನ್ನಡ ವರದಿ (10-5-2019):ಸದಾ ಭೂಕಂಪಗಳಿಂದ ಒಂದಿಲ್ಲೊಂದು ಸಮಯದಲ್ಲಿ ನಲುಗುವ ದ್ವೀಪ ರಾಷ್ಟ್ರ ಜಪಾನ್’ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ದಕ್ಷಿಣ ಜಪಾನ್‌ನ ಕರಾವಳಿ ಭಾಗದಲ್ಲಿ ಶುಕ್ರವಾರ ಬೆಳಗ್ಗೆ ಎರಡು ಭೂಕಂಪಗಳು ಸಂಭವಿಸಿವೆ. ಮೊದಲ ಭೂಕಂಪ ಪ್ರಮಾಣವು ರಿಕ್ಟರ್ ಮಾಪಕದಲ್ಲಿ 5.6 ಹಾಗೂ ಎರಡನೇ ಭೂಕಂಪ ಪ್ರಮಾಣ 6.3ರಷ್ಟು ತೀವ್ರತೆ ದಾಖಲಾಗಿದೆ.

ಭೂಕಂಪದ ಕೇಂದ್ರ ಬಿಂದು ಮಿಯಾಝಾಕಿ ಶಿ ನಿಂದ 37ಕಿ.ಮೀ ದೂರದಲ್ಲಿದೆ ಎಂದು ತಿಳಿದುಬಂದಿದೆ. ಇನ್ನು ಕರಾವಳಿಯಲ್ಲಿ ಸಂಭವಿಸಿದ್ದ ಭಾರಿ ಪ್ರಮಾಣದ ಭೂಕಂಪನದಿಂದಾಗಿ ಜಪಾನ್ ಕರಾವಳಿ ಜನತೆ ತೀವ್ರ ಆತಂಕಕ್ಕೆ ಕಾರಣವಾಗಿದ್ದರು. ಆದರೆ ಸಮುದ್ರದ ತೀರಾ ಆಳದಲ್ಲಿ ಭೂಕಂಪನ ಸಂಭವಿಸಿದ್ದರಿಂದ ಸುನಾಮಿ ಸಾಧ್ಯತೆ ಇಲ್ಲ ಎಂದು ಅಮೆರಿಕ ಭೂ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಭೂ ಕಂಪನದಿಂದಾಗಿ ಯಾವುದೇ ಪ್ರಾಣ ಹಾನಿ, ಇತರೆ ಯಾವುದೇ ನಷ್ಟ ಸಂಭವಿಸಿದ ಕುರಿತು ಮಾಹಿತಿ ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here