ಜಾಮಿಯಾದಲ್ಲಿ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದಾತ ಯಾರು ಗೊತ್ತೇ??

0
174

ನ್ಯೂಸ್ ಕನ್ನಡ ವರದಿ: ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಳಿ ಸಿಎಎ ವಿರುದ್ಧ ಪ್ರತಿಭಟಿಸುತ್ತಿದ್ದ ಜನರ ಮೇಲೆ ಇಂದು ಮಧ್ಯಾಹ್ನ ಅಪರಿಚಿತ ವ್ಯಕ್ತಿ ಗುಂಡು ಹಾರಿಸಿದ್ದಾನೆ ಈ ಕೃತ್ಯ ಎಸಗುವ ಕೆಲ ನಿಮಿಷಗಳ ಮೊದಲು ಫೇಸ್ ಬುಕ್ ಲೈವ್ ನಡೆಸಿದ್ದ ಎಂದು ವರದಿಯಾಗಿದೆ.

ಫೇಸ್ ಬುಕ್ ನಲ್ಲಿ ದುಷ್ಕರ್ಮಿಯ ಹೆಸರು “ರಾಮ್ ಭಕ್ತ್ ಗೋಪಾಲ್” ಎಂದಿದ್ದು, ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದ ಆತ ಫೇಸ್ ಬುಕ್ ಲೈವ್ ವಿಡಿಯೋ ನೀಡಿದ್ದ. ನಂತರ ‘ನಿಮಗೆ ನಾನು ಆಝಾದಿ ನೀಡುತ್ತೇನೆ’ ಎಂದು ಹೇಳುತ್ತಾ ಗುಂಡು ಸಿಡಿಸಿದ್ದ. ಗುಂಡೇಟು ತಗಲಿ ಒಬ್ಬ ವಿದ್ಯಾರ್ಥಿ ಗಾಯಗೊಂಡಿದ್ದ. ಈ ಪ್ರದೇಶದಲ್ಲಿ ಗೊಂದಲ ಮತ್ತು ಭೀತಿ ಉಂಟಾಗಿದೆ.

ಈ ಕೃತ್ಯಕ್ಕೆ ಎಸಗಲು ಈತ ಮೊದಲೇ ಮಾನಸಿಕವಾಗಿ ಸಿದ್ಧಗೊಂಡಿದ್ದ ಎನ್ನುವುದನ್ನು ಈತನ ಫೇಸ್ ಬುಕ್ ಮುಖಪುಟ ತೋರಿಸುತ್ತದೆ. ಈತನ ಫೇಸ್ ಬುಕ್ ಪೋಸ್ಟ್ ನಲ್ಲಿ ಪ್ರಚೋದನಕಾರಿ, ಸಿಎಎ ಪರ ಬರಹಗಳೇ ಇರುವುದು ನೋಡಬಹುದು. ಹಾಗೂ “ನನ್ನ ಅಂತಿಮ ಯಾತ್ರೆಯಲ್ಲಿ ಕೇಸರಿ ಬಟ್ಟೆ ಹಾಸಿ, ಜೈಶ್ರೀರಾಮ್ ಎಂದು ಕೂಗಿ” ಎಂದು ಆತ ಬರೆದುಕೊಂಡಿದ್ದಾನೆ.

ಇದಲ್ಲದೆ “ಶಾಹೀನ್ ಬಾಗ್ , ಗೇಮ್ ಓವರ್” ಎಂದೂ ಆತ ಬರೆದಿದ್ದಾನೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here