ಎಲ್ಲವನ್ನೂ ತ್ಯಜಿಸಿ ಜೈನ ಸನ್ಯಾಸಿಯಾಗಿ ದೀಕ್ಷೆ ಸ್ವೀಕರಿಸಿದ 24ರ ಹರೆಯದ ಚಾರ್ಟರ್ಡ್ ಅಕೌಂಟಂಟ್!

0
567

ನ್ಯೂಸ್ ಕನ್ನಡ ವರದಿ-(20.04.18): ತಮ್ಮ ಜೀವನದಲ್ಲಿ ಎಲ್ಲಾ ಸುಖ ಸಂಪತ್ತುಗಳಿದ್ದರೂ ನೆಮ್ಮದಿಯನ್ನು ಹುಡುಕಿಕೊಂಡು ಹೋಗುವವರ ಸಂಖ್ಯೆಯು ಇತ್ತೀಚೆಗೆ ಹೆಚ್ಚಾಗಿದೆ. ಈ ಹಿಂದೆ ದಂಪತಿಗಳಿಬ್ಬರು ತಮ್ಮೆಲ್ಲಾ ಕೋಟ್ಯಂತ ರೂ. ಆಸ್ತಿಯನ್ನು ತ್ಯಜಿಸಿ ಸನ್ಯಾಸಿಯಾಗಿದ್ದರು. ಇದೀಗ 24 ವರ್ಷದ ಯುವಕ, ಕೋಟ್ಯಂತರ ರೂ. ಆಸ್ತಿಯನ್ನು ಹೊಂದಿದ್ದು, ವೃತ್ತಿಯಲ್ಲಿ ಕೈತುಂಬಾ ಸಂಬಳ ಬರುವ ಚಾರ್ಟರ್ಡ್ ಅಕೌಂಟಂಟ್ ಎಲ್ಲವನ್ನೂ ತ್ಯಜಿಸಿ ಜೈನ ಮುನಿಯಾಗಲು ತೀರ್ಮಾನಿಸಿದ್ದು, ಇಂದು ಅವರು ದೀಕ್ಷೆ ಸ್ವೀಕರಿಸಿದ್ದಾರೆಂದು ತಿಳಿದು ಬಂದಿದೆ.

ಮೋಕ್ಷೇಶ್ ಶೇಟ್ ಅವರ ಕುಟುಂಬ ಜೆಕೆ ಕಾರ್ಪೋರೇಶನ್ ಮೂಲಕ ವ್ಯವಹಾರ ನಡೆಸುತ್ತಿದೆ. ಮೋಕ್ಷೇಶ್ ವಜ್ರ, ಮೆಟಲ್ ಹಾಗೂ ಶುಗರ್ ಇಂಡಸ್ಟ್ರೀಸ್ ಬಗ್ಗೆ ಆಸಕ್ತಿ ಹೊಂದಿದ್ದರು. ಆದರೆ ಎಲ್ಲವನ್ನೂ ತ್ಯಜಿಸಿ ಇತ್ತೀಚೆಗೆ ಗಾಂಧೀನಗರ-ಅಹಮ್ಮದಾಬಾದ್ ರಸ್ತೆ ಸಮೀಪದ ತಪೋವನ್ ಸರ್ಕಲ್ ನಲ್ಲಿ ನಡೆದ ಸಮಾರಂಭದಲ್ಲಿ ಜೈನ ಮುನಿಯಾಗಿ ದೀಕ್ಷೆ ಪಡೆದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಕರ್ನಾಟಕ, ಗುಜರಾತ್, ಮಹಾರಾಷ್ಟ್ರದ 15 ಸ್ಥಳಗಳಲ್ಲಿ ಮೋಕ್ಷೇಶ್ ಅವರ ಶೋಭಾ ಯಾತ್ರೆ ನಡೆಸಲು ಅವರ ಕುಟುಂಬ ಸಿದ್ಧತೆ ನಡೆಸಿದೆ. ಇವರ ಕುಟುಂಬ ಮೂಲತಃ ಉತ್ತರ ಗುಜರಾತ್ ನ ಡೇಸಾದವರು. ಅಲ್ಲಿಂದ ವಲಸೆ ಬಂದು ಕಳೆದ 60 ವರ್ಷಗಳಿಂದ ಮುಂಬೈಯಲ್ಲಿ ನೆಲೆಸಿದ್ದಾರೆ.

LEAVE A REPLY

Please enter your comment!
Please enter your name here