ನಮ್ಮ ಬಿಜೆಪಿ ಶಾಸಕರು ಸಿಂಹದ ಮರಿಗಳು, ಯಾವುದೇ ಆಮಿಷಕ್ಕೆ ಒಳಗಾಗಲ್ಲ!: ಈಶ್ವರಪ್ಪ

0
236

ನ್ಯೂಸ್ ಕನ್ನಡ ವರದಿ: ದೋಸ್ತಿ ಶಾಸಕರೇ ಈ ಸರ್ಕಾರವನ್ನು ಒಪ್ಪುತ್ತಿಲ್ಲ, ಬಿಜೆಪಿಯಂತೂ ಮೊದಲೇ ಇದನ್ನು ಒಪ್ಪಲ್ಲ, ಜನರೂ ನಂಬಲ್ಲ. ಹೀಗಾಗಿ ಈ ಬಾರಿ ಸರ್ಕಾರ ಬೀಳೋದು ಖಚಿತ. ಅದಕ್ಕೂ ಮುನ್ನಾ ಮೈತ್ರಿ ನಾಯಕರು ರಾಜೀನಾಮೆ ನೀಡಿದರೆ ಗೌರವವಿರುತ್ತದೆ ಎಂದು ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಯಾವುದೇ ಆಪರೇಷನ್ ಕಮಲ ಮಾಡಿಲ್ಲ. ಈ ಬಾರಿ ಮೈತ್ರಿ ಸರ್ಕಾರ ಉಳಿಯಲ್ಲ ಅನ್ನೋ ನಂಬಿಕೆ ನನಗಿದೆ. ದೋಸ್ತಿ ಶಾಸಕರೇ ಈ ಸರ್ಕಾರವನ್ನು ಒಪ್ಪುತ್ತಿಲ್ಲ, ಬಿಜೆಪಿಯಂತೂ ಮೊದಲೇ ಇದನ್ನು ಒಪ್ಪಲ್ಲ, ಜನರೂ ನಂಬಲ್ಲ. ಹೀಗಾಗಿ ಗೌರವ ಇರಬೇಕೆಂದರೆ ಮೈತ್ರಿ ಸರ್ಕಾರದ ನಾಯಕರು ತಕ್ಷಣ ರಾಜೀನಾಮೆ ಕೊಡಬೇಕು. ಬಿಜೆಪಿ ಯಾವುದೇ ಆಪರೇಷನ್ ಕಮಲ ಮಾಡಿಲ್ಲ ಎನ್ನುವುದು ಈಗ ಸಾಬೀತಾಗಿದೆ. ಅತೃಪ್ತ ಶಾಸಕರೇ ಬಾಯಿಬಿಟ್ಟು ಈ ಬಗ್ಗೆ ಹೇಳುತ್ತಿದ್ದಾರೆ. ಆದರೆ ಕೈ-ದಳ ನಾಯಕರು ಇದನ್ನು ಒಪ್ಪದೆ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇದೇ ವೇಳೆ ಬಿಜೆಪಿಯ ಯಾವುದೇ ಶಾಸಕರು ಬೇರೆ ಪಕ್ಷಕ್ಕೆ ಸೇರ್ಪಡೆ ಆಗಲ್ಲ. ಬಿಜೆಪಿ ಶಾಸಕರು ಸಿಂಹದ ಮರಿಗಳು ಇದ್ದ ಹಾಗೆ. ನಮ್ಮವರು ಬೇರೆ ಪಕ್ಷಕ್ಕೆ ಹೋಗುವುದು ಕೇವಲ ಊಹಾಪೋಹ. ಅವರು ಯಾವುದೇ ಆಮಿಷಕ್ಕೆ ಬಲಿಯಾಗಲ್ಲ, ಇದೆಲ್ಲ ಸುಳ್ಳು ಸುದ್ದಿ ಎಂದು ಮಾಧ್ಯಮಗಳ ವಿರುದ್ಧ ಕಿಡಿಕಾರಿದರು.

LEAVE A REPLY

Please enter your comment!
Please enter your name here