ವಿದೇಶದಿಂದ ಮರಳುವವರಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಸಚಿವರಿಗೆ ಐಎಸ್’ಎಫ್ ಬಹ್ರೈನ್ ಮನವಿ

0
396

ನ್ಯೂಸ್ ಕನ್ನಡ ವರದಿ: (09.10.18): ಮನಾಮ: ವಿದೇಶದಲ್ಲಿ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಸ್ವದೇಶಕ್ಕೆ ವಾಪಾಸಗುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಕರಾವಳಿ ಕರ್ನಾಟಕ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೀರೀಕ್ಷಿತ ತುರ್ತು ಪರಿಸ್ಥಿತಿ ಘೋಷಣೆಯಾದಂತಿದೆ. ಆದ್ದರಿಂದ ಸ್ವದೇಶಕ್ಕೆ ವಾಪಾಸಗುತ್ತಿರುವ ಅನಿವಾಸಿ ಕನ್ನಡಿಗರ ಪುರ್ನವಸತಿ ಪ್ರಕ್ರಿಯೆಗಾಗಿ ಯೋಜನೆಗಳನ್ನು ಸರಕಾರವು ಹಮ್ಮಿಕೊಳ್ಳಬೇಕೆಂದು ಇಂಡಿಯನ್ ಸೋಷಿಯಲ್ ಫೋರಂ ಬಹರೈನ್ ನ ಕರ್ನಾಟಕ ಘಟಕವು ಆಗ್ರಹಿಸಿದೆ.

ಬಹರೈನ್ ಪ್ರವಾಸದಲ್ಲಿದ್ದ ಕರ್ನಾಟಕ ಸರಕಾರದ ವಸತಿ ಮತ್ತು ನಗರಾಭಿವೃಧ್ಧಿ ಸಚಿವ ಯೂ.ಟಿ ಕಾದರ್‍ರವರನ್ನು ಐ.ಎಸ್.ಎಫ್ ನಿಯೋಗವು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಯಿತು. ಮತ್ತು ಸೂಕ್ತ ಸೌಲಭ್ಯ ಮತ್ತು ಯೋಜನೆಗಳನ್ನು ರೂಪಿಸಲಾಗುವುದು ಎಂದು ಸಚಿವರು ಭರವಸೆಯನ್ನು ನೀಡಿದರು.

ಈ ನಿಯೋಗದಲ್ಲಿ ಐ.ಎಸ್.ಎಫ್ ಕರ್ನಾಟಕ ಘಟಕದ ಅಧ್ಯಕ್ಷರಾದ ಇರ್ಫಾನ್ ಅಬ್ದುಲ್ ರಹಿಮಾನ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಫೀಝ್ ಉಳ್ಳಾಲ, ಮತ್ತು ಸಿದ್ದೀಕ್ ಮಂಜೇಶ್ವರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here