ತಾರಕಕ್ಕೇರಿದ ತಿಕ್ಕಾಟ; ಇರಾನ್ ಮೇಲೆ ಮತ್ತಷ್ಟು ನಿರ್ಬಂಧ ಹೇರಿದ ಅಮೇರಿಕ!

0
160

ನ್ಯೂಸ್ ಕನ್ನಡ ವರದಿ (9-5-2019):  ಇರಾನಿನ ಉಕ್ಕು ಹಾಗೂ ಗಣಿ ಉದ್ಯಮದ ಆಮದು ಮೇಲೆ ನಿರ್ಬಂಧವನ್ನು ಹೇರಿ ಅಮೆರಿಕ ಆದೇಶ ಹೊರಡಿಸಿದೆ. ಈ ಉದ್ಯಮಗಳಿಂದ ಬರುತ್ತಿದ್ದ ಹಣವನ್ನು ಭಯೋತ್ಪಾದಕ ಸಂಘಟನೆಗಳಿಗೆ ನೆರವು, ಸೇನೆ ವಿಸ್ತರಣೆಗೆ ಇರಾನ್ ಬಳಸುವ ಸಾಧ್ಯತೆ ಇರುವುದರಿಂದ ಈ ಕ್ರಮ ಜರಗಿಸಿದ್ದು ಅಮೇರಿಕಾದ ಉದ್ದೇಶವಾಗಿರಬಹುದು.

ಈ ನಿರ್ಭಂಧದಿಂದ ಇರಾನಿನ ಉಕ್ಕು, ಕಬ್ಬಿಣ, ಅಲ್ಯೂಮಿನಿಯಂ ಹಾಗೂ ತಾಮ್ರ ಉದ್ಯಮದ ರಫ್ತಿನ ಮೇಲೆ ಭಾರಿ ಪರಿಣಾಮ ಬೀರಲಿದೆ. ಇರಾನ್‌ಗೆ ಇನ್ನಷ್ಟು ಆದಾಯ ಕೊರತೆಯಾಗುವ ಸಾಧ್ಯತೆ ಇದೆ. ಇರಾನ್‌ನ ಅಣ್ವಸ್ತ್ರ ಹಾಗೂ ಕ್ಷಿಪಣಿ ಪರೀಕ್ಷೆ ಮಧ್ಯಪ್ರಾಚ್ಯದಲ್ಲಿ ಇರಾನ್ ನ ಪ್ರಭಾವ ಕುಗ್ಗಿಸುವುದು ನಿರ್ಬಂಧನ ಮುಂದುವರೆದ ಆದೇಶದ ಉದ್ದೇಶವಾಗಿದೆ. ಈ ನಿರ್ಬಂಧದ ಆದೇಶದ ನಡುವೆಯೂ ಇರಾನ್ ಸರ್ಕಾರದೊಂದಿಗೆ ಮಾತುಕತೆಗೆ ಅಮೆರಿಕ ಬದ್ಧವಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಹಿಂದೆ ಬರಾಕ್ ಒಬಾಮಾ ಸರಕಾರವಿದ್ದಾಗ ಇರಾಕ್ ಗೆ ನೀಡಿದ್ದ ಸಹಾಯಗಳನ್ನು ಟ್ರಂಪ್ ವಾಪಾಸ್ ಪಡೆದಿದ್ದರು.

LEAVE A REPLY

Please enter your comment!
Please enter your name here