ಶೇನ್ ವಾಟ್ಸನ್ ಭರ್ಜರಿ ಶತಕ: ಬೃಹತ್ ಮೊತ್ತ ದಾಖಲಿಸಿದ ಚೆನ್ನೈ ಸೂಪರ್ ಕಿಂಗ್ಸ್!

0
731

ನ್ಯೂಸ್ ಕನ್ನಡ ವರದಿ-(20.04.18): ಇಂಡಿಯನ್ ಪ್ರೀಮಿಯರ್ ಲೀಗ್ ನ 17ನೇ ಪಂದ್ಯಾಟವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳ ನಡುವೆ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂ ಪುಣೆಯಲ್ಲಿ ನಡೆಯುತ್ತಿದೆ. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶೇನ್ ವಾಟ್ಸನ್ ರ ಬರ್ಜರಿ ಶತಕದೊಂದಿಗೆ 20 ಓವರ್ ಗಳಲ್ಲಿ 204 ರನ್ ದಾಖಲಿಸಿದ್ದು, ರಾಜಸ್ತಾನ ತಂಡಕ್ಕೆ 205 ರನ್ ಗಳ ಗುರಿ ನೀಡಿದೆ.

ಟಾಸ್ ಗೆದ್ದ ರಾಜಸ್ತಾನ ರಾಯಲ್ಸ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಿಂದಲೇ ಚೆನ್ನೈ ತಂಡದ ಆಟಗಾರರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಆರಂಭಿಸಿದರು. ಸುರೇಶ್ ರೈನಾ(46) ಮತ್ತು ಶೇನ್ ವಾಟ್ಸನ್ ಉತ್ತಮವಾಗಿ ಬ್ಯಾಟಿಂಗ್ ನಡೆಸಿದರು. ಈ ಸಾಲಿನ ಐಪಿಎಲ್ ನಲ್ಲಿ ಎರಡನೇ ಶತಕವನ್ನು ವಾಟ್ಸನ್ ದಾಖಲಿಸಿದರು. ಕೊನೆಯ ಓವರ್ ನ ನಾಲ್ಕನೇ ಎಸೆತದಲ್ಲಿ 106 ರನ್ ಗಳಿಸಿ ವಾಟ್ಸನ್ ಔಟ್ ಆದರು. ಕೊನೆಗೆ ಆಗಮಿಸಿದ ಡ್ವೇನ್ ಬ್ರಾವೋ(24) ಗಮನಾರ್ಹ ಪ್ರದರ್ಶನ ತೋರಿದರು.ಬೌಲಿಂಗ್ ನಲ್ಲಿ 3 ವಿಕೆಟ್ ಗಳಿಸುವ ಮೂಲಕ ಬೆನ್ ಲಾಲಿನ್ ಮಿಂಚಿದರು

LEAVE A REPLY

Please enter your comment!
Please enter your name here